Publish Date: Thu, 05 Aug 2021 (20:25 IST)
Updated Date: Thu, 05 Aug 2021 (20:30 IST)
ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಜಿಲೆಟೀನ್ ಸ್ಪೋಟ ಪ್ರಕರಣದಲ್ಲಿ ಆರು ಜನರ ದುರ್ಮರಣ ಹೊಂದಿದ್ರು ಸತ್ತವರ ಕುಟುಂಭಸ್ಥರು ಅನಾಥರಾಗಿದ್ರು , ಈ ಪ್ರಕರಣಕ್ಕೆ ಸಂಭಂದಿಸಿದ ಆರೋಪಿಗಳು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಇದರ ಬೆನ್ನಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ತಾಲ್ಲೂಕಿನ ಹೊರವಲಯದಲ್ಲಿರುವ ವಿದುರಾಶ್ವಥ ಇಂಡಸ್ಟ್ರಿಯಲ್ ಏರಿಯಾದ ಪ್ರಿಕಾಟ್ ಲಿಮಿಟೆಡ್ ಖಾಸಗಿ ಕಂಪನಿಯಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ನೀರಿನಲ್ಲಿ ಮಿಕ್ಸ್ ಮಾಡುವ ವೇಳೆ ಆಕಸ್ಮಿಕವಾಗಿ ಸ್ಪೋಟಗೊಂಡು ಐದು ಜನರಿಗೆ ತೀವ್ರವಾದ ಗಾಯಗಳಾಗಿ ಐದು ಜನರ ಸ್ಥಿತಿಯೂ ಚಿಂತಾಜನಕವಾಗಿದೆ.
ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರಗೆ ರವಾನೆ ಮಾಡಲಾಗಿದೆ.
ಹರೀಶ್ , ವೆಂಕಟೇಶ್ , ರವಿಕುಮಾರ್ , ಆನಂದ್ ಕುಮಾರ್,ಗೊರವಯ್ಯ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.
ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಬೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ ,