Select Your Language

Notifications

webdunia
webdunia
webdunia
webdunia

ಮಂಗಳೂರಿನಲ್ಲಿ ಮುಳುಗಿದ ದೋಣಿ: 12 ಮೀನುಗಾರರ ರಕ್ಷಣೆ

fisherman
12 ಜನ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಟ್ ಒಂದು ಸಮುದ್ರ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗಿಗೆ ಡಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ. ಕೂಡಲೇ ಅವರನ್ನು ಹಿಂದಿನಲ್ಲಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹನ್ನೊಂದು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದು ಒಬ್ಬ ನೀರಿನಲ್ಲಿ ಕಾಣೆಯಾಗಿದ್ದಾನೆ.
ಕಾಣೆಯಾದವನು ತಮಿಳುನಾಡು ಮೂಲದವನು. ಉಳ್ಳಾಲ ಮೊಗವೀರಪಟ್ಟದ ಭಾನುಪ್ರಕಾಶ್ ಎಂಬುವವರ ಮಾಲೀಕತ್ವದ ಆದ್ಯ ಹೆಸರಿನ ಬೋಟ್ ಇದಾಗಿದೆ.
ಮುಳುಗಿದ್ದ ಬಾರ್ಜ್ ಹಡಗನ್ನು ತೆರವುಗೊಳಿಸಿಲ್ಲ ಹಾಗೂ ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ. ಇದರಿಂದಾಗಿ ಮೀನುಗಾರಿಕಾ ಬೋಟ್ ಗಳಿಗೆ ಇದು ಅಪಾಯಕಾರಿಯಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಡೆಗೋಡೆ ಮೇಲೇರಿ ನಿಂತ ಟ್ರಕ್: ಆಗುಂಬೆ ಘಾಟ್ ನಲ್ಲಿ ತಪ್ಪಿದ ದುರಂತ