Publish Date: Thu, 29 Jul 2021 (15:13 IST)
Updated Date: Thu, 29 Jul 2021 (20:46 IST)
ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘರ್ಷಣೆ ನಡೆದಿದೆ. ಮಂಗಳೂರಿನ ಬೈಕಂಪಾಡಿ ರೈಲ್ವೆ ಗೇಟ್ ಸಮೀಪ ಸ್ಥಳೀಯ ಮಂಗಳಮುಖಿಯರು ಮತ್ತು ಹೊರಗಿನ ಜಿಲ್ಲೆಗಳಿಂದ ಬಂದಿರುವ ಮಂಗಳಮುಖಿಯರ ನಡುವೆ ಜಗಳವಾಗಿದೆ.
ಹೊರಗಿನ ರಾಜ್ಯ, ಜಿಲ್ಲೆಯವರು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸ್ಥಳೀಯ ಮಂಗಳಮುಖಿಯರು ಒತ್ತಡ ಹೇರಿದ್ದಲ್ಲದೇ, ಹೊರಗಿನ ಜಿಲ್ಲೆಯವರು ಬಂದಿರುವುದರಿಂದ ನಮಗೆ ಆದಾಯ ಕಡಿಮೆಯಾಗಿದೆ ಎಂದು ದೂರಿ ಜಗಳವಾಡಿದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪೊಲೀಸ್ ಆಯುಕ್ತರಿಗೆ ಕೂಡ ದೂರು ಕೊಡಲಾಗಿದೆ. ಮಂಗಳಮುಖಿಯರ ದೂರು ಸ್ವೀಕರಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.