Select Your Language

Notifications

webdunia
webdunia
webdunia
webdunia

ತಡೆಗೋಡೆ ಮೇಲೇರಿ ನಿಂತ ಟ್ರಕ್: ಆಗುಂಬೆ ಘಾಟ್ ನಲ್ಲಿ ತಪ್ಪಿದ ದುರಂತ

agumbe
agumbe , ಗುರುವಾರ, 5 ಆಗಸ್ಟ್ 2021 (20:14 IST)
ಆಗುಂಬೆ ಘಾಟ್ ನ 6 ಮತ್ತು 7 ನೇ ತಿರುವಿನ ಮಧ್ಯದಲ್ಲಿ ಪ್ರಪಾತದತ್ತ ಮುಖ ಮಾಡಿದ ಟ್ರಕ್ ರಸ್ತೆ ಬದಿಯಲ್ಲಿ ಅಡ್ಡಲಾಗಿ ನಿರ್ಮಿಸಲಾಗಿರುವ ಉಕ್ಕಿನ ತಡೆಗೋಡೆ ಮೇಲೆ ಹತ್ತಿ ನಿಂತಿದೆ.
ಶಿವಮೊಗ್ಗ ಕಡೆಯಿಂದ ಭತ್ತವನ್ನು ತುಂಬಿಕೊಂಡು ಮಂಗಳೂರಿನತ್ತ ತೆರಳುತ್ತಿದ್ದ ಟ್ರಕ್ ಅಪಘಾತಕ್ಕೀಡಾಗಿದ್ದರಿಂದ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಟ್ರಕ್ ಪ್ರಪಾತಕ್ಕೆ ಬೀಳುವುದು ತಪ್ಪಿದೆ. ಅರ್ಧ ಟ್ರಕ್ ಹೆದ್ದಾರಿ ಕಡೆ ಇದ್ದರೆ ಇನ್ನರ್ಧ ಟ್ರಕ್ ಪ್ರಪಾತದ ಕಡೆ ನೇತಾಡುತ್ತಿದೆ, ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ ತಪ್ಪಿದೆ.
ಒಂದು ವೇಳೆ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದೇ ಆದಲ್ಲಿ ಆಗುಂಬೆ ಘಾಟ್ ನ ಏಳನೇ ತಿರುವಿನಲ್ಲಿ ಬರುತ್ತಿರುವ ವಾಹನಗಳ ಮೇಲೆಯೇ ಬೀಳುತ್ತದೆ. ಇದರಲ್ಲಿ ಸಾವು ನೋವು ವರದಿಯಾಗುವ ಸಂಭವ ಇತ್ತು. ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಭಾರೀ ಅವಘಡ ತಪ್ಪಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನರೇಗ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ಸಾವು