ಅಕ್ರಮ ಸ್ಪಾ ಪೊಲೀಸ್ ರೈಡ್

Webdunia
ಶನಿವಾರ, 5 ಫೆಬ್ರವರಿ 2022 (15:27 IST)
ಅಕ್ರಮ ಚಟುವಟಿಕೆ ನಡೆಸುತ್ತಿದ್ದ ನಗರದ ಮೂರು ಸ್ಪಾಗಳ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು ಹೊರದೇಶದ ಇಬ್ಬರು ಮಹಿಳೆಯರು ಸೇರಿದಂತೆ 13 ಮಂದಿಯನ್ನು ಸಂರಕ್ಷಿಸಿದ್ದಾರೆ.
ನಗರದ ರಾಯಲ್ ಸ್ಪಾ ಮತ್ತು ಸಲೂನ್ ಅಸ್ತೆಟಿಕ್ ಯೂನಿಸೆಕ್ಸ್ ಸಲೂನ್ ಸ್ಪಾ ಹಾಗೂ ನಿಸರ್ಗ ಆಯುರ್ವೇದಿಕ್ ಕ್ಲಿನಿಕ್‍ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಈ ಮೂರು ಸ್ಪಾ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ದಾಳಿ ಮಾಡಿದೆ.
 
ದಾಳಿ ವೇಳೆ ಹೊರದೇಶದ ಇಬ್ಬರು ಮಹಿಳೆಯರು ಸೇರಿದಂತೆ 13 ಮಹಿಳೆಯರನ್ನು ಸಂರಕ್ಷಿಸಲಾಗಿದೆ. ಈ ಪೈಕಿ ರಾಜ್ಯ, ಹೊರರಾಜ್ಯ ಹಾಗೂ ಹೊರ ದೇಶದ ಮಹಿಳೆಯರು ಇದ್ದಾರೆ.
 
ಅವರಲ್ಲಿ ನೇಪಾಳ, ಟರ್ಕಿ ದೇಶದ ಇಬ್ಬರು ಮಹಿಳೆಯರು, ನಾಗಾಲ್ಯಾಂಡ್ ಇಬ್ಬರು, ಅಸ್ಸಾಂನ ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರು ಇದ್ದಾರೆ. ಪ್ರಕರಣಗಳಿಗೆ ಸಂಬಂಸಿದಂತೆ 9 ಮಂದಿ ವಿರುದ್ಧ ಎಚ್‍ಎಸ್‍ಆರ್ ಲೇಔಟ್, ಅಶೋಕನಗರ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
ಈ ಕಾರ್ಯಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರ, ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments