Select Your Language

Notifications

webdunia
webdunia
webdunia
webdunia

ಭೂಕುಸಿತಕ್ಕೆ ಮಾಂಸ ಸೇವನೆ ಕಾರಣವೆಂದ ಐಐಟಿ ನಿರ್ದೇಶಕ!

ಭೂಕುಸಿತಕ್ಕೆ ಮಾಂಸ ಸೇವನೆ ಕಾರಣವೆಂದ ಐಐಟಿ ನಿರ್ದೇಶಕ!
ಹಿಮಾಚಲ ಪ್ರದೇಶ , ಶನಿವಾರ, 9 ಸೆಪ್ಟಂಬರ್ 2023 (18:24 IST)
ಪ್ರಾಣಿಗಳ ಮೇಲಿನ ಕ್ರೌರ್ಯದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭೂಕುಸಿತಗಳು ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ ಎಂದು ಐಐಟಿ ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ. ಅಲ್ಲದೆ, ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ನೀವು ಮುಗ್ಧ ಪ್ರಾಣಿಗಳನ್ನು ಕಡಿಯುತ್ತಿದ್ದೀರಿ. ಅವುಗಳು ಕೂಡಾ ಸಹಜೀವನ ಸಂಬಂಧವನ್ನು ಹೊಂದಿದ್ದು, ಅವುಗಳ ಹತ್ಯೆಯಿಂದ ಪರಿಸರದ ಅವನತಿಯಾಗುತ್ತಿದೆ. ನಾವು ಹೀಗಿಯೇ ಮಾಡಿದರೆ, ಹಿಮಾಚಲ ಪ್ರದೇಶವು ಗಮನಾರ್ಹವಾದ ಅವನತಿ ಹೊಂದಲಿದೆ ಎಂದು ಲಕ್ಷ್ಮೀಧರ್ ಬೆಹೆರಾ ಹೇಳಿದ್ದಾರೆ.ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ಹಲವು ಸಂಗತಿಗಳು ಮತ್ತೆ ಮತ್ತೆ ಘಟಿಸುತ್ತಿವೆ. ಇವೆಲ್ಲವೂ ಪ್ರಾಣಿಗಳ ಮೇಲಿನ ಕ್ರೌರ್ಯದ ಪರಿಣಾಮಗಳು. ಜನರು ಮಾಂಸವನ್ನು ತಿನ್ನುತ್ತಾರೆ ಎಂದು ಹೇಳಿದ್ದಾರೆ.ಇನ್ನು ಬೆಹೆರಾ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ BJP-JDS ಮೈತ್ರಿ ಮಾತುಕತೆ ಸಕ್ಸಸ್