Select Your Language

Notifications

webdunia
webdunia
webdunia
webdunia

ಹಿಮಾಚಲದಲ್ಲಿ ಭೂಕುಸಿತ: ನೆಲ ಕಚ್ಚಿದ ಮನೆಗಳು

ಹಿಮಾಚಲದಲ್ಲಿ ಭೂಕುಸಿತ: ನೆಲ ಕಚ್ಚಿದ ಮನೆಗಳು
ಹಿಮಾಚಲ ಪ್ರದೇಶ , ಗುರುವಾರ, 24 ಆಗಸ್ಟ್ 2023 (19:40 IST)
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ, ನೋಡ ನೋಡುತ್ತಿದ್ದಂತೆ ಹತ್ತಾರು ಮನೆಗಳು ನೆಲಕಚ್ಚಿವೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ. ಭೂಕುಸಿತದಿಂದ ಹಲವು ಮನೆಗಳು ಕುಸಿದಿವೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕುಲುವಿನಲ್ಲಿ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದ 8 ರಿಂದ 9 ಕಟ್ಟಡಗಳು ಕುಸಿದುಬಿದ್ದಿವೆ. ಒಂದು ವಾರದ ಹಿಂದೆ ಆಡಳಿತ ಮಂಡಳಿ ಈ ಕಟ್ಟಡಗಳಿಂದ ತೆರವು ಮಾಡಿದ್ದರಿಂದ ಈ ಅವಘಡದ ಸಂದರ್ಭದಲ್ಲಿ ಯಾರೂ ಈ ಕಟ್ಟಡಗಳಲ್ಲಿ ವಾಸಿಸದಿರುವುದು ದುರಂತವನ್ನ ತಪ್ಪಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಉಂಟಾಗಿ ಈ ಅವಘಡ ಸಂಭವಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫುಡ್ ಆರ್ಡರ್ ಮಾಡಿದ್ರೆ ಚಂದ್ರಯಾನ ಸ್ಪೆಷಲ್​!