Select Your Language

Notifications

webdunia
webdunia
webdunia
webdunia

ಮದುವೆ ಮಂಟಪದಲ್ಲಿ ಈ ರೀತಿ ಮಾಡಿದ್ರೆ ಗಂಡುಮಕ್ಕಳು ಯಾವಾ ಧೈರ್ಯದಲ್ಲಿ ಮದುವೆ ಆಗೋದು ಹೇಳಿ

ಹಾಸನದ ಮದುವೆ ರದ್ದು

Sampriya

ಹಾಸನ , ಶುಕ್ರವಾರ, 23 ಮೇ 2025 (15:37 IST)
Photo Credit X
ಹಾಸನ : ಸಿನಿಮಾದಲ್ಲಿ ನಡೆಯುವ ದೃಶ್ಯದಂತೆ ತಾಳಿ ಕಟ್ಟುವ ವೇಳೆ ವಧು, ಮದುವೆಯನ್ನೇ ನಿಲ್ಲಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.

ಹಾಸನನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಮದುವೆ ನಿಶ್ಚಯವಾಗಿತ್ತು.

ಮುಹೂರ್ತದ ವೇಳೆ ವರ ತಾಳಿ ಹಿಡಿದು ನಿಂತಿದ್ದಾಗ ವಧು ನನಗೆ ಈ ಮದುವೆ ಬೇಡ ಎಂದಿದ್ದಾಳೆ. ಇದರಿಂದ ವಧು ಕಣ್ಣೀರು ಹಾಕಿದ್ದು, ಆತನನ್ನು ಮನೆಯವರು ಸಮಾಧಾನ ಮಾಡಿದ್ದಾರೆ.

ಮುಹೂರ್ತಕ್ಕೂ ಮುನ್ನಾ ವಧುವಿಗೆ ಕರೆ ಬಂದ ಬೆನ್ನಲ್ಲೇ  ವಧು ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.

ತಕ್ಷಣವೇ ಮದುವೆ ಬೇಡ ಎಂದು ಪಲ್ಲವಿ ಕೊಠಡಿಗೆ ಹೋಗ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ.

ಕಲ್ಯಾಣಮಂಟಪಕ್ಕೆ ವಧು-ವರನ ಕಡೆಯ ನೂರಾರು ಮಂದಿ ಆಗಮಿಸಿದ್ದರು. ಕಡೆ ಗಳಿಗೆಯಲ್ಲಿ ಮದುವೆ ನಿಂತು ಹೋಗಿದ್ದಕ್ಕೆ ವಧುವಿನ ಪೋಷಕರು ಕಣ್ಣೀರಿಟ್ಟಿದ್ದಾರೆ.

ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದು ಸದ್ಯ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಪ್ರೀತಿಸುವ ಹುಡುಗನ ಬಗ್ಗೆ ಸದ್ಯ ಯಾವುದೇ ವಿವರ ಲಭ್ಯವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

DK Shivakumar: ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆ ಶಿವಕುಮಾರ್: 25 ಲಕ್ಷ ಕೊಟ್ಟಿದ್ದೆ ತಪ್ಪೇನು ಎಂದ ಡಿಸಿಎಂ