Select Your Language

Notifications

webdunia
webdunia
webdunia
webdunia

‘ಅಶಿಸ್ತು ಹೆಚ್ಚಿದ್ರೆ ಸರ್ವಾಧಿಕಾರಿಯಾಗಿ ಬದಲಾಗುವೆ’

If there is more indiscipline
bangalore , ಮಂಗಳವಾರ, 5 ಜುಲೈ 2022 (19:38 IST)
ನನ್ನ ಆಡಳಿತದಲ್ಲಿ ಅಶಿಸ್ತು ಮತ್ತು ದುಷ್ಕೃತ್ಯಗಳು ಹೆಚ್ಚಾದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ನಾನು ಸರ್ವಾಧಿಕಾರಿಯಾಗಿ ಬದಲಾಗಬೇಕಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಸೋಮವಾರ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.. ಯಾರೇ ಆಗಲಿ ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಕಾನೂನು ಪ್ರಕಾರ ಮತ್ತು ಜನರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದರು . ನಾನು ತುಂಬಾ ಪ್ರಜಾಸತ್ತಾತ್ಮಕವಾಗಿ ಬದಲಾಗಿದ್ದೇನೆ ಎಂದು ನನ್ನ ಆಪ್ತರು ಹೇಳುತ್ತಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ಆಲಿಸುವುದು ಮತ್ತು ಗೌರವಿಸುವುದು ಪ್ರಜಾಪ್ರಭುತ್ವವಾಗಿದೆ. ಪ್ರಜಾಪ್ರಭುತ್ವ ಎಂದರೆ ಯಾರೂ, ಏನು ಬೇಕಾದರೂ ಮಾಡುವಂಥದ್ದಲ್ಲ. ಅಶಿಸ್ತು ಮತ್ತು ದುಷ್ಕೃತ್ಯಗಳು ಹೆಚ್ಚಾದರೆ, ನಾನು ಸರ್ವಾಧಿಕಾರಿಯಾಗಿ ಬದಲಾಗುತ್ತೇನೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ನಾನಿದನ್ನು ಕೇವಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಹೇಳುತ್ತಿಲ್ಲ. ಬದಲಾಗಿ ಎಲ್ಲರಿಗೂ ಹೇಳುತ್ತಿದ್ದೇನೆ ಎಂದು ಸ್ಟಾಲಿನ್​ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗನಿಗೆ ಯಾರು ಸಾಲ ಕೊಡಬೇಡಿ -ಮಾಜಿ ಶಾಸಕ ವಿನಂತಿ