Select Your Language

Notifications

webdunia
webdunia
webdunia
webdunia

ನೀರಿನ ಬಿಲ್ ಕಟ್ಟದಿದ್ದರೆ ಬರಲಿದೆ ಮನೆಗೆ ಬಿಎಂಟಿಎಫ್ ನೋಟಿಸ್

If the water bill is not paid
bangalore , ಶನಿವಾರ, 16 ಜುಲೈ 2022 (19:47 IST)
ಜಲ ಮಂಡಳಿಗೆ ನೀರಿನ ಬಿಲ್ ಪಾವತಿ ಮಾಡದಿರುವ ಗ್ರಾಹಕರಿಂದ ಕಳೆದ 5 ವರ್ಷಗಳಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆ ಬಿಎಂಟಿಎಫ್ 19.34 ಕೋಟಿ ರೂ. ವಸೂಲಿ ಮಾಡಿಕೊಡಲು ನೆರವಾಗಿದೆ.
ಕಾವೇರಿ ನೀರು ಸರಬರಾಜಿಗೆ ಜಲ ಮಂಡಳಿಯಿಂದ ನೀರಿನ ಶುಲ್ಕ ವಸೂಲಿ ಮಾಡುತ್ತಿದೆ.
ಅದರಂತೆ ನಗರದಲ್ಲಿ 10.5 ಲಕ್ಷ ಕುಡಿಯುವ ನೀರಿನ ಸಂಪರ್ಕ ಒದ ಗಿಸಲಾಗಿದೆ. ಇದರಿಂದವಾರ್ಷಿಕ 1,600 ಕೋಟಿ ರೂ. ಆದಾಯ ಪಡೆಯುತ್ತಿದೆ.ಆದರೆ, ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಗ್ರಾಹಕರು ನೀರಿನ ಬಿಲ್ ಸಮರ್ಪಕ ವಾಗಿ ಪಾವತಿಸದಿರುವ, ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದ ಮತ್ತು ನೀರಿನ ಕಳ್ಳತನ ಮಾಡುವವರ ವಿರುದ್ಧ ಕ್ರಮಕ್ಕೆ ಜಲಮಂಡಳಿ ಬಿಎಂಟಿಎಫ್ಗೆ ದೂರು ನೀಡುತ್ತಿದೆ. ಅದರಂತೆ 2018 ರಿಂದ 2022ರ ಜೂನ್ ಅಂತ್ಯಕ್ಕೆ ಒಟ್ಟು 551 ದೂರುಗಳು ದಾಖಲಿಸಲಾಗಿದೆ. ಆ ದೂರಿನಹಿನ್ನೆಲೆಯಲ್ಲಿ ಬಿಎಂಟಿಎಫ್ ಕೈಗೊಂಡ ಕ್ರಮಗಳಿಂದಾಗಿ ಜಲಮಂಡಳಿಗೆ ಒಟ್ಟು 19.34 ಕೋಟಿ ರೂ. ವಸೂಲಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ತುಂಬಾ ದುಬಾರಿಯಾಗುತ್ತಾ..?