Publish Date: Thu, 18 Jan 2024 (14:40 IST)
Updated Date: Thu, 18 Jan 2024 (14:43 IST)
ಬೆಂಗಳೂರು-ನಾಳೆ ಕಾಂಗ್ರೆಸ್ ಮೀಟಿಂಗ್ ವಿಚಾರವಾಗಿ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಕಾಂಗ್ರೆಸ್ ಮೀಟಿಂಗ್ ಭಾರತ್ ಜೋಡೋ ಭವನದಲ್ಲಿ ಇದೆ.ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಾ ಇದ್ದಾರೆ ಹೀಗಾಗಿ ಸಿಎಂ ಕೂಡ ಅಲ್ಲಿ ಇರಬೇಕಾಗುತ್ತೆ ಹೀಗಾಗಿ ನಾಳೆ ಸಂಜೆ ೪.೩೦ರ ಬಳಿಕ ಮೀಟಿಂಗ್ ಇದೆ.ಲೋಕಸಭಾ ಚುನಾವಣೆ ಬಗ್ಗೆ ಮೊದಲ ಮೀಟಿಂಗ್ ಇದು,ಈಗಾಗಲೇ ವೀಕ್ಷಕರು ಲಿಸ್ಟ್ ಕೊಟ್ಟಿದ್ದಾರೆ ಅದರ ಬಗ್ಗೆ ಚರ್ಚೆ ಮಾಡುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನೂ ಸಚಿವರು ಸ್ಫರ್ಧೆಗೆ ಹಿಂದೇಟು ವಿಚಾರವಾಗಿ ಪಕ್ಷ ಹೇಳಿದ್ರೆ ಎಲ್ಲರೂ ಕೇಳಬೇಕು ಎಂದು ಪರೋಕ್ಷವಾಗಿ ಸಚಿವರ ಸ್ಫರ್ಧೆ ಬಗ್ಗೆ ಡಿಕೆ ಶಿವಕುಮಾರ್ ಸುಳಿವು ಕೊಟ್ಟಿದ್ದಾರೆ.