Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸನ್ನು ಫಿನಾಯಿಲ್ ಹಾಕಿ ತೊಳೆದಂತೆ- ಆರ್.ಅಶೋಕ

ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸನ್ನು ಫಿನಾಯಿಲ್ ಹಾಕಿ ತೊಳೆದಂತೆ- ಆರ್.ಅಶೋಕ
ತುಮಕೂರು , ಸೋಮವಾರ, 25 ಡಿಸೆಂಬರ್ 2017 (10:00 IST)
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಲಿಟ್ಟಲ್ಲೆಲ್ಲ ಕಾಂಗ್ರೆಸನ್ನು ಫಿನಾಯಿಲ್ ಹಾಕಿ ತೊಳೆದಂತೆ ಎಂದು ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.

ಕುಣಿಗಲನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕಾಲ್ಗುಣ ಚೆನ್ನಾಗಿದೆ. ಅವರನ್ನು ಕಾಂಗ್ರೆಸ್ ನವರು ಕರೆಯೋದು ಬೇಡ, ನಾವೇ ಕರೀತಿವಿ, ಅವರು ರಾಜ್ಯಕ್ಕೆ ಬಂದರೆ ಬಿಜೆಪಿ ಲಾಭ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಪಕ್ಷ ಗುಡಿಸಿ ಗುಂಡಾಂತರ ಆಗ್ತಾ ಇದೆ. ಅವರೇ ಸ್ವತಃ ಕರ್ನಾಟಕದಲ್ಲಿ ಕಾಂಗ್ರೆಸನ್ನು ಫಿನಾಯಲ್ ಹಾಕಿ ತೊಳೆಯಲಿ ಎಂದಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಕಾಲೆಳೆದಿದ್ದು, ಪ್ರಧಾನಿಯಾಗಿದ್ದ 10 ವರ್ಷಗಳು ತುಟಿ ಬಿಚ್ಚರಲಿಲ್ಲ. ಇದರಿಂದ ಚೀನಾ, ಪಾಕಿಸ್ತಾನದವರು ಆಕ್ರಮಣ ಮಾಡುತ್ತಿದ್ದರು. ನರೇಂದ್ರ ಮೋದಿ ಅವರನ್ನು ನೋಡಿ ವೈರಿ ದೇಶಗಳು ಬಾಲ ಮುದುಡಿ ಕೂತಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಮಹದಾಯಿ ಹೋರಾಟಗಾರರ ಆಕ್ರೋಶ; ಹೋರಾಟಗಾರರು ಹೇಳಿದ್ದೇನು ಗೊತ್ತಾ...?