Publish Date: Sun, 09 Apr 2023 (11:38 IST)
Updated Date: Sun, 09 Apr 2023 (12:53 IST)
ಬೆಂಗಳೂರು : ಮೋದಿ ಕಾಡು ಪ್ರಾಣಿಗಳನ್ನು ನೋಡಲು ಬಂದ ತಕ್ಷಣ ಜನ ವೋಟು ಒತ್ತಿ ಬಿಡ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ, ಪ್ರವಾಹದಿಂದ ಜನ ಬೀದಿಗೆ ಬಂದಾಗ ಮೋದಿ ಬರಲಿಲ್ಲ. ಈಗ ಚುನಾವಣೆ ಹೊತ್ತಿನಲ್ಲಿ ಸಫಾರಿಗೆ ಬಂದಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು. ಆದರೆ ವನ್ಯ ಜೀವಿಗಳಿಂದ ಎಷ್ಟು ದಾಳಿ ಆಗಿದೆ ಎಂಬ ಮಾಹಿತಿ ಮೋದಿಯವರಿಗೆ ಇದೆಯೇ? ದಾಳಿಗೊಳಗಾದ ಒಂದು ಕುಟುಂಬಕ್ಕಾದರೂ ಮೋದಿ ಭೇಟಿ ಕೊಟ್ಟಿದ್ದಾರಾ ಎಂದು ಕಿಡಿಕಾರಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಆಹಾರದ ಕೊರತೆ ಇದೆ ಎಂಬ ವರದಿಯಿದೆ. ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ವಿಚಾರವಾಗಿ ಚರ್ಚೆಯಾಗಿದೆ.