Select Your Language

Notifications

webdunia
webdunia
webdunia
webdunia

ಸುರಪುರ ಕ್ಷೇತ್ರದಲ್ಲಿ ನಿಷೇಧಾಜ್ಞೆ ವಿಸ್ತರಣೆ

ಸುರಪುರ ಕ್ಷೇತ್ರದಲ್ಲಿ ನಿಷೇಧಾಜ್ಞೆ ವಿಸ್ತರಣೆ
ಯಾದಗಿರಿ , ಭಾನುವಾರ, 9 ಏಪ್ರಿಲ್ 2023 (11:23 IST)
ಯಾದಗಿರಿ : ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕೊಡೇಕಲ್ನಲ್ಲಿ ಇದೇ ಏಪ್ರಿಲ್ 6 ರಂದು ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಿದ್ದ ನಿಷೇಧಾಜ್ಞೆಯನ್ನು ಮತ್ತೆರಡು ದಿನಕ್ಕೆ ವಿಸ್ತರಣೆ ಮಾಡಲಾಗಿದೆ.
 
ಏಪ್ರಿಲ್ 8 ರವರೆಗೂ ಇದ್ದ 144 ಸೆಕ್ಷನ್ ಅನ್ನು ಏಪ್ರಿಲ್ 12ರ ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಆದೇಶ ನೀಡಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 5 ಪ್ರಕರಣಗಳು ದಾಖಲಾಗಿವೆ. 25 ಆರೋಪಿಗಳ ಬಂಧನವಾಗಿದೆ. ಸದ್ಯ ಕ್ಷೇತ್ರದಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡುವ ಜೊತೆಗೆ ಇನ್ನುಳಿದ ಆರೋಪಿಗಳ ಪತ್ತೆಗಾಗಿ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮುಲ್ ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ : ಸಿ.ಟಿ ರವಿ