Select Your Language

Notifications

webdunia
webdunia
webdunia
webdunia

ತಿರುಪತಿಯಲ್ಲಿ ಹಿಂದೂಗಳು ಮಾತ್ರ ಎಂದಾದರೆ ವಕ್ಫ್ ಮಂಡಳಿಯಲ್ಲಿ ಹಿಂದೂಗಳು ಯಾಕಿರಬೇಕು: ಓವೈಸಿ

AIMIM Chief Asaduddin Owaisi, TTD Board B R Naidu, Waqf Council,

Sampriya

ಬೆಂಗಳೂರು , ಭಾನುವಾರ, 3 ನವೆಂಬರ್ 2024 (13:11 IST)
Photo Courtesy X
ಬೆಂಗಳೂರು: ತಿರುಮಲ ತಿರುಪತಿ ತಿಮ್ಮಪ್ಪನ ದೇವಸ್ಥಾನಂ ಅಡಿಯಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಕೇವಲ ಹಿಂದೂ ಸಿಬ್ಬಂದಿಯನ್ನಷ್ಟೇ ಸೀತಿಮಿಗೊಳಿಸುವ ಚಿಂತನೆಗೆ ನಮ್ಮ ಆಕ್ಷೇಪವಿಲ್ಲ. ಆದರೆ  ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ 2 ಮುಸ್ಲಿಮೇತರ ಸದಸ್ಯರು ಇರುವುದನ್ನು ಕಡ್ಡಾಯಗೊಳಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.

ಅಕ್ಟೋಬರ್ 31 ರಂದು ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷ ಬಿ ಆರ್ ನಾಯ್ಡು ಅವರು ದೇವಾಲಯದ ಆವರಣದಲ್ಲಿ ಕೆಲಸ ಮಾಡುವ ಎಲ್ಲಾ ವ್ಯಕ್ತಿಗಳು ಹಿಂದೂಗಳಾಗಿರಬೇಕು ಎಂದು ಹೇಳಿದ್ದರು.

ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷರು ತಿರುಮಲದಲ್ಲಿ ಹಿಂದೂಗಳಿಗೆ ಮಾತ್ರ ಸಿಬ್ಬಂದಿ ನೀತಿಯನ್ನು ಘೋಷಿಸಿದ್ದರೆ, ಕೇಂದ್ರದ ಎನ್‌ಡಿಎ ಸರ್ಕಾರವು ಮುಸ್ಲಿಮೇತರರನ್ನು ವಕ್ಫ್ ಬೋರ್ಡ್‌ಗಳಿಗೆ ಸೇರಿಸಲು ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

ಟಿಟಿಡಿ ಮಂಡಳಿಯ (ತಿರುಮಲ ತಿರುಪತಿ ದೇವಸ್ಥಾನಗಳು) 24 ಸದಸ್ಯರಲ್ಲಿ ಒಬ್ಬ ಸದಸ್ಯ ಕೂಡ ಹಿಂದೂ ಅಲ್ಲ... ಟಿಟಿಡಿಯ ನೂತನ ಅಧ್ಯಕ್ಷರು ಅಲ್ಲಿ ಕೆಲಸ ಮಾಡುವವರು ಹಿಂದೂಗಳಾಗಿರಬೇಕು ಎಂದು ಹೇಳುತ್ತಾರೆ... ನಾವು ವಿರೋಧಿಸುವುದಿಲ್ಲ. ಆದರೆ ವಕ್ಫ್‌ ಬೋರ್ಡ್‌ ಮೇಲೆ ನಿಲುವು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಜಮೀರ್ ಅಹ್ಮದ್‌ರನ್ನು ಗಡಿಪಾರು ಮಾಡಿದ್ರೆ ರಾಜ್ಯಕ್ಕೆ ಒಳಿತು: ಬಿವೈ ವಿಜಯೇಂದ್ರ