Publish Date: Sun, 03 Nov 2024 (11:42 IST)
Updated Date: Sun, 03 Nov 2024 (11:49 IST)
ಬೆಂಗಳೂರು: ಕನ್ನಡ ಭಾಷಣವನ್ನು ತಪ್ಪಾಗಿ ಓದಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕನ್ನಡ ರಾಜ್ಯೋತ್ಸವ ವೇದಿಕೆ ವೇಳೆ ಬರೆದುಕೊಂಡು ಬಂದಿದ್ದ ಭಾಷಣವನ್ನು ತಪ್ಪಾಗಿ ಓದಿದ್ದರು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಧು ಬಂಗಾರಪ್ಪ ಅವರಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕನ್ನಡ ಕಲಿಸಿ ಅಂತ ಎಕ್ಸ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ದಿನ, ಕನ್ನಡಾಂಬೆಯನ್ನು ಆರಾಧಿಸುವ ಕಾರ್ಯಕ್ರಮದಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದುರಿಸಿರುವ ಮುತ್ತಿನಂಥ ಪದಗಳಿವು!
ಕನ್ನಡ ಓದಲು, ಬರೆಯಲು ಬಾರದ ಅನಕ್ಷಸ್ಥರು ಶಿಕ್ಷಣ ಮಂತ್ರಿಯಾದರೇ, ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕನ್ನಡ ವ್ಯಾಕರಣದ ಕುರಿತು ಉದ್ದುದ್ದ ಭಾಷಣ ಬಿಗಿಯುವ ಸಿದ್ದರಾಮಯ್ಯ ನವರೇ, ಮಕ್ಕಳ ಉಜ್ವಲ ಭವಿಷ್ಯ ಕತ್ತಲಾಗುವ ಮುನ್ನ ಭಾಷಾಭಿಮಾನವಿರದ ಮಧು ಬಂಗಾರಪ್ಪನವರಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕನ್ನಡ ಕಲಿಸಿ, ಕನ್ನಡ ಉಳಿಸಿ.