Publish Date: Tue, 20 Sep 2022 (17:18 IST)
Updated Date: Tue, 20 Sep 2022 (17:22 IST)
ದೇವನಹಳ್ಳಿಯಲ್ಲಿ ಕಳೆದ ರಾತ್ರಿ ಇಡ್ಲಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ನನಗೆ ಇಡ್ಲಿ ಬೇಗ ಕೊಡಬೇಕೆಂದು ದೇವನಹಳ್ಳಿ ಪುರಸಭೆ ಮುಂಭಾಗ ಗ್ಯಾಂಗ್ ವಾರ್ ನಡೆದಿದೆ. ದಿನೇಶ್ ಮತ್ತು ತನಜೀಂ ಎಂಬ ಎರಡು ಗುಂಪಿನ ನಡುವೆ ಗಲಾಟೆ ನಡೆದಿದೆ
ತನಜಿಂ ಚಾಕುವಿನಿಂದ ಇರಿದ ಎಂಬ ಕಾರಣಕ್ಕೆ ಕಾರು ಜಖಂ ಮಾಡಿದ ಆರೋಪ ಕೇಳಿಬಂದಿದೆ. ದಾಳಿಯಿಂದ ಕಾರಿನ ಗ್ಲಾಸ್ಗಳೆಲ್ಲಾ ಪುಡಿ ಪುಡಿಪುಡಿಯಾಗಿವೆ. ಇತ್ತೀಚೆಗೆ ದೇವನಹಳ್ಳಿಯಲ್ಲಿ ಗಲಾಟೆ ಪ್ರಕರಣ ಹೆಚ್ಚಾಗಿವೆ. ಈಶಾನ್ಯ ವಿಭಾಗಕ್ಕೆ ಡಿಸಿಪಿಯಾಗಿ ಖಡಕ್ ಅಧಿಕಾರಿ ಅನೂಪ್ ಶೆಟ್ಟಿ ಬಂದ ಮೇಲೂ ದೇವನಹಳ್ಳಿಯಲ್ಲಿ ಗಾಂಜಾ ಕಿರಿಕ್ಗಳು ನಿಂತಿಲ್ಲ. ಗಾಂಜಾ ಕಿಕ್ನಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಪುಡಿ ರೌಡಿಗಳ ಗಲಾಟೆಗಳು ಹೆಚ್ಚಾಗಿವೆ. ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕಿದೆ..