Publish Date: Wed, 30 Sep 2020 (21:35 IST)
Updated Date: Wed, 30 Sep 2020 (21:39 IST)
ಒಂದು ತಿಂಗಳು ಕಳೆಯುವ ಮೊದಲೇ ತಮ್ಮನ್ನು ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಡಿಸಿ ಬಿ.ಶರತ್ ಸಿಎಟಿ ಮೊರೆ ಹೋಗಿದ್ದಾರೆ.
ಕಲಬುರಗಿಯಿಂದ ಮೈಸೂರಿಗೆ ಬಿ.ಶರತ್ ವರ್ಗಾವಣೆಗೊಂಡಿದ್ದರು.
ಆದರೆ ಮೈಸೂರು ಡಿಸಿಯಾಗಿ ಒಂದು ತಿಂಗಳು ಕಳೆಯುವ ಮೊದಲೇ ಸರಕಾರ ವರ್ಗಾವಣೆ ಮಾಡಿದೆ. ಅಲ್ಲದೇ ಸ್ಥಳವನ್ನೂ, ಹುದ್ದೆಯನ್ನೂ ತೋರಿಸಿಲ್ಲ.
ಹೀಗಾಗಿ ಸಿಎಟಿ ಮೊರೆ ಹೋಗಿದ್ದು, ಸಿಎಟಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಮಾಡಿದೆ.
ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಸರಕಾರ ಆದೇಶ ಹೊರಡಿಸಿದೆ.