Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಬಿಡುಗಡೆ ಬಗ್ಗೆ ಹರಿದಾಡುತ್ತಿದೆ ಹೀಗೊಂದು ರೂಮರ್

ಕೆಜಿಎಫ್ 2 ಬಿಡುಗಡೆ ಬಗ್ಗೆ ಹರಿದಾಡುತ್ತಿದೆ ಹೀಗೊಂದು ರೂಮರ್
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (12:03 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.


ಕೊರೋನಾ ಇಲ್ಲದೇ ಹೋಗಿದ್ದರೆ ಕೆಜಿಎಫ್ 2 ಇದೇ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಚಿತ್ರೀಕರಣವೂ ಪೂರ್ತಿಯಾಗಿಲ್ಲ. ಇದೀಗ ಫೈನಲ್ ಹಂತದ ಚಿತ್ರೀಕರಣವನ್ನು ನಡೆಸಲಾಗುತ್ತಿದೆಯಷ್ಟೇ. ಹೀಗಾಗಿ ಈ ವರ್ಷ ಚಿತ್ರ ತೆರೆಗೆ ಬಾರದು. ಆದರೆ ಮುಂದಿನ ವರ್ಷ ಜನವರಿಯಲ್ಲಿ ಚಿತ್ರಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಜನವರಿ 14 ಕ್ಕೆ ಚಿತ್ರ ಬಿಡುಗಡೆಯಾಗಬಹುದು ಎಂದು ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಚಿತ್ರತಂಡ ಏನೂ ಕನ್ ಫರ್ಮ್ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ