Publish Date: Wed, 30 Sep 2020 (21:28 IST)
Updated Date: Wed, 30 Sep 2020 (21:30 IST)
ರಾಜ್ಯದಲ್ಲಿ ಉಪ ಚುನಾವಣೆ ಎದುರಾಗಿದ್ದು, ಶಿರಾ ಕ್ಷೇತ್ರದ ಉಪ ಚುನಾವಣೆಗಾಗಿ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದೆ.
ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದಕ್ಕೆ ನಿಗೂಢತೆ ಕಾಯ್ದುಕೊಂಡಿರುವುದು ಕುತೂಹಲ ಹೆಚ್ಚುವಂತೆ ಮಾಡಿದೆ.
ಇನ್ನು ಶಿರಾ ಮತಕ್ಷೇತ್ರದಲ್ಲಿ ಸಭೆ ನಡೆಸಿರುವ ಹೆಚ್.ಡಿ.ಕೆ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡೋದಾಗಿ ಸ್ಪಷ್ಟಪಡಿಸಿದ್ದಾರೆ.
ಶಿರಾ ಜನತೆ ವಿಷ ಕೊಡ್ತೀರಾ? ಹಾಲು ಕೊಡ್ತೀರಾ? ಎಂದು ಕೇಳಿದ್ದು, ಇನ್ಮುಂದಿನ ರಾಜಕೀಯ ಹೋರಾಟ ಹೊಸ ದಿಕ್ಕಿನಲ್ಲಿ ಸಾಗಲಿದೆ. ಬೈ ಎಲೆಕ್ಷನ್ ಸತ್ವ ಪರೀಕ್ಷೆಯಾಗಿದ್ದು ಕಾರ್ಯಕರ್ತರು ಒಗ್ಗಟ್ಟಾಗಿ ಎಲೆಕ್ಷನ್ ಎದುರಿಸಬೇಕೆಂದಿದ್ದಾರೆ.