ನಮ್ಮ ಆಸೆ ಈಡೇರಿದರೆ ಬರುವ ಕೆಲವೇ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಬಹುದು. ಜೀವಂತ ಇದ್ದರೇ ಇದೇ ಅವಧಿ, ಸತ್ತ
ರೇ ಮುಂದಿನ ಅವಧಿಯಲ್ಲಿ ಎಂದು ಸಚಿವ ಉಮೇಶ್ ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಆದರೆ ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ. ಹೋದರೆ (ಸತ್ತರೆ) ನನ್ನ ಕಡೆಯಿಂದ ಏನು ಮಾಡೋಕೆ ಆಗೋಲ್ಲ. ಮತ್ತೇ ಏನು ಹೇಳಬೇಕು ನಿಮಗೆ ಎಂದು ಚಟಾಕಿ ಹಾರಿಸಿದರು.
ದೇಶದಲ್ಲಿ ಪ್ರಧಾನಿ, ರಾಜ್ಯದಲ್ಲಿ ಸಿಎಂ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೆಲವು ಘೋಷಣೆ, ನೀವು ಜಿಲ್ಲೆಗೆ ಏನಾದರೂ ಘೋಷಣೆ ಮಾಡುತ್ತೀರಾ ಎನ್ನುವ ಪ್ರಶ್ನೆಗೆ, ಪ್ರಧಾನಿ ಅಲ್ಲಿ(ದೆಹಲಿ,) ಮುಖ್ಯಮಂತ್ರಿ ಬೆಂಗಳೂರಿನಲ್ಲಿ ನಾನು ಇಲ್ಲಿದ್ದೀನಿ ಅವರು ಏನು ಹೇಳಿದ್ದಾರೆ ನಾನು ಕೇಳಿಲ್ಲ. ಬರುವ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಅವರು ಹೇಳಿದರು.
ನಮ್ಮ ಇಲಾಖೆಯಲ್ಲಿ ಏನಿದೆ.ಆನೆ, ಹುಲಿಗಳಿವೆ ಎಂದರು. ಜಿಲ್ಲೆಯ ರಾಜಕಾರಣ, ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯ ಸಚಿವರೇ ಉಸ್ತುವಾರಿಗಳಾದರೇ ಒಳ್ಳೆಯದು, ಜಿಲ್ಲೆಯಲ್ಲಿ ಗೊಂದಲಗಳಿಂದ ಪಕ್ಷ ಬೇರೆಯವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟಿದೆ.ಪಕ್ಷದ ನಿರ್ಣಯಗಳಿಗೆ ನಾನು ತಲೆ ಬಾಗುತ್ತೇನೆ ಎಂದು ತಿಳಿಸಿದರು.
75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನನ್ನ ಅದೃಷ್ಟವೋ ವಿಜಯಪುರ ಬಾಗಲಕೋಟೆ ಜಿಲ್ಲೆಯ ಸುದೈವವೋ ಗೊತ್ತಿಲ್ಲ. ನಾನು ಮೊದಲ ಬಾರಿ ಮಂತ್ರಿಯಾಗಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ 50ನೇ ಸುವರ್ಣ ಮಹೋತ್ಸವದ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡಿದ್ದೇ. ಈಗ 75ನೇ ಅಮೃತ ಮಹೋತ್ಸವದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಮಾಡಿದ್ದೇನೆ ಎಂದರು.