Publish Date: Thu, 15 Jul 2021 (14:55 IST)
Updated Date: Thu, 15 Jul 2021 (14:59 IST)
ಖಾಸಗಿ ಬಸ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಕೆರೆಏರಿ ಮೇಲೆ ತಡರಾತ್ರಿ ಜರುಗಿದೆ.
ಬೆಂಗಳೂರಿನಿಂದ ಶ್ರೀನಿವಾಸಪುರ ಮಾರ್ಗವಾಗಿ ಪುಂಗನೂರಿಗೆ ತೆರಳುತ್ತಿದ್ದ MBS ಖಾಸಗಿ ಬಸ್ ಗೆ ಅತಿವೇಗದಿಂದ ಬಂದ ಕ್ಯಾಂಟರ್ ಮುಂಬದಿಯ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ ಇನ್ನು ಬಸ್ ನಲ್ಲಿ 20 ಜನ ಪ್ರಯಾಣಿಕರು ಪ್ರಯಾಣಿಸ್ತಿದ್ದು, ಖಾಸಗಿ ಬಸ್, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.
ಘಟನೆಯಿಂದ ಭಾರಿ ಅನಾಹುತ ತಪ್ಪಿದ್ದು ಬಸ್ ಹಾಗೂ ಕ್ಯಾಂಟರ್ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ, ಇನ್ನು ಕ್ಯಾಂಟರ್ ಚಾಲಕನ ಅಜಾಗರೂ ಕಥೆಯಿಂದಲೇ ಘಟನೆ ಸಂಬಂವಿದೆ ಎನ್ನಲಾಗ್ತಿದ್ದು, ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,