Select Your Language

Notifications

webdunia
webdunia
webdunia
webdunia

ಸಿಎಂ ಆಗುವ ಯೋಗ್ಯತೆ ನನಗಿದೆ: ಉಮೇಶ್ ಕತ್ತಿ

ಸಿಎಂ ಆಗುವ ಯೋಗ್ಯತೆ ನನಗಿದೆ: ಉಮೇಶ್ ಕತ್ತಿ
bengaluru , ಸೋಮವಾರ, 12 ಜುಲೈ 2021 (14:52 IST)
ನಾನು 8 ಬಾರಿ ಶಾಸಕ ಆದವನು, ಸಚಿವನಾಗಿ 6 ಇಲಾಖೆ ನಿರ್ವಹಿಸಿದ ಅನುಭವಿದೆ. ರಾಜಕೀಯವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗೆ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಧಾರವಾಡದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಂಕ ರಹಿತನಾಗಿ ಶಾಸಕ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ತೀರ್ಮಾನಿಸಿ
ದರೆ ಸಿಎಂ ಆಗುವ ಆಸೆ ಇದೆ. ಸಿಎಂ ಆದ ಮೇಲೆ ಪ್ರಧಾನಿಯಾಗುವ ಅಸೆಯೂ ಇರುತ್ತದೆ ಎಂದರು.
ಸದ್ಯಕ್ಕೆ ನಾವು ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ. ಕರ್ನಾಟಕ ಸಿಎಂ ಆಗುತ್ತೇನೆ. ಏನಾದರೂ ಉತ್ತರ ಕರ್ನಾಟಕ ತೊಂದರೆ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವೆ. ದಿನ ಬೆಳಗ್ಗೆ ಎದ್ದ ತಕ್ಷಣ ಉತ್ತರ ಕರ್ನಾಟಕ ಒಡೆಯಲು ಆಗುವುದಿಲ್ಲ. ತೊಂದರೆ ಆದಾಗ ಕೂಗು ಎಬ್ಬಿಸಬೇಕಾಗುತ್ತದೆ. ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ. ಆಖಂಡ ಕರ್ನಾಟಕದಲ್ಲಿ ಬದುಕಬೇಕು, ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎಂದು ಅವರು ವಿವರಿಸಿದರು.
ಈ ಸಲ ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಸಿಗಬಹುದು. ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಈಗ ನಂಗೆ 60 ವರ್ಷ, ಹದಿನೈದು ವರ್ಷದಲ್ಲಿ ಸಿಎಂ ಆಗಬಹುದು. 8 ಸಲ ಶಾಸಕ ಆಗಿದ್ದೇನೆ. 11 ಬಾರಿಯಾದರೂ ಸರಿ ಎಂಎಲ್‌ಎ ಆಗುವೆ ಎಂದು ಉಮೇಶ್ ಕತ್ತಿ ಪ್ರಶ್ನಿಸಿದರು.
ಅರವಿಂದ ಬೆಲ್ಲದ ಯಾಕೆ ಸಿಎಂ ಆಗಬಾರದು? ಅವರ ತಂದೆ ಶಾಸಕರಾಗಿದ್ದರು. ಬೆಲ್ಲದ ಎರಡು ಸಲ ಶಾಸಕರಾಗಿದ್ದಾರೆ. ಯತ್ನಾಳ, ನಾನು, ಮುರಗೇಶ ನಿರಾಣೆ, ಬೆಲ್ಲದ ಸಹ ಸಿಎಂ ಆಗಬಹುದು. ಉತ್ತರ ‌ಕರ್ನಾಟಕದವರು ಯಾರಾದರೂ ಸಿಎಂ ಆಗಬಹುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಉಮಾಪತಿಗೆ 2 ದಿನ ಕಾಲವಕಾಶ ನೀಡಿದ್ದೇನೆ: ನಟ ದರ್ಶನ್