Select Your Language

Notifications

webdunia
webdunia
webdunia
webdunia

ರಾಜಕೀಯದಲ್ಲಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ

ರಾಜಕೀಯದಲ್ಲಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆ
mysore , ಬುಧವಾರ, 11 ಆಗಸ್ಟ್ 2021 (16:16 IST)
ರಾಜಕೀಯ ನಿವೃತ್ತಿಗೆ ವಯಸ್ಸು ಮುಖ್ಯವಲ್ಲ. ಉತ್ಸಾಹ, ಆರೋಗ್ಯ ಚೆನ್ನಾಗಿದ್ದರೆ ಮುಂದುವರಿಯಬಹುದು. ನನಗೀಗ 75 ವರ್ಷ. ನನ್ನ ಉತ್ಸಾಹ ಕುಗ್ಗಿಲ್ಲ ಆದ್ದರಿಂದ ರಾಜಕೀಯದಲ್ಲಿ ಮುಂದುವರಿದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಈಗಲೂ ಕೆಲಸ ಮಾಡುವ ಉತ್ಸಾಹ ಇದೆ. ಆದ್ದರಿಂದ ಮುಂದುವರಿಯುತ್ತಿದ್ದೇನೆ. ಮುಂದುವರಿಯತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಪರೋಕ್ಷವಾಗಿ ಮುಂದಿನ ಚುನಾವಣಾ ಅಭ್ಯರ್ಥಿ ರೇಸ್ ನಲ್ಲಿ ಇರುವುದನ್ನು ಒಪ್ಪಿಕೊಂಡರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ಬಿಜೆಪಿ ಯಾವತ್ತು ಹಿಂದೂಳಿದ ವರ್ಗಗಳ ಪರವಾಗಿ ಇಲ್ಲ. ಎಲ್ಲ ಹಂತದಲ್ಲೂ ಮೀಸಲು ವಿರೋ
ಧ ಮಾಡಿದವರು. ಮೀಸಲಾತಿ ಪರವಾಗಿದ್ದಾರೆ ಸಂವಿಧಾನ ಬದಲಾಗಬೇಕು ಅಂತಿರಲಿಲ್ಲ ಎಂದರು.
ಸರ್ಕಾರ ಜಾತಿ ಗಣತಿ ಮಾಡಿಸಬೇಕು. ಆ ವೇಳೆ ಯಾರು ಸಮಾಜದಲ್ಲಿ ಬಡತನದಲ್ಲಿದ್ದಾರೆಂದು ಗೊತ್ತಾಗಲಿದೆ. ಆ ವೇಳೆ ವಿಶೇಷವಾಗಿ ಆ ಜನರಿಗೆ ಮೀಸಲಾತಿ ನೀಡಲು ಅನುಕೂಲ ಆಗುತ್ತೆ.  ಇದು ಒಂದು ದಾಖಲೆ‌ಯಾಗಿ ಉಳಿಯುತ್ತೆ ಎಂದು ಅವರು ಅಭಿಪ್ರಾಯಪಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಕಟ್ಟಡ ಶುಲ್ಕ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ