Select Your Language

Notifications

webdunia
webdunia
webdunia
webdunia

ಸಿಟಿ ರವಿ ಆ ಮಾತು ಹೇಳಿದ್ದನ್ನು ನಾನೇ ಕೇಳಿಸಿಕೊಂಡೆ: ಯತೀಂದ್ರ ಸಿದ್ದರಾಮಯ್ಯ

Minister Lakshmi Hebbalkar, MLC CT Ravi, MLC Dr.Yatindra

Sampriya

ಮೈಸೂರು , ಸೋಮವಾರ, 23 ಡಿಸೆಂಬರ್ 2024 (14:55 IST)
Photo Courtesy X
ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ 'ಆ' ಮಾತು ಹೇಳಿದ್ದು ಸತ್ಯ. ಸ್ವತಃ ನಾನೇ ಆ  ಮಾತನ್ನು ಕೇಳಿಸಿಕೊಂಡೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನಾನು ಆ ಪದವನ್ನು ಬಳಸಿಯೇ ಇಲ್ಲ ಎಂದು ರವಿ ಹೇಳುತ್ತಿದ್ದಾರೆ. ಅವರು ಬಳಸಿದ್ದು ಫ್ರಸ್ಟ್‌ರೇಟ್‌ ಎಂಬ ಪದವಲ್ಲ. ಅವರು ಬಳಸಿದ್ದು ಅಶ್ಲೀಲ ಪದ. ಅದಕ್ಕೆ ನಾನೇ ಸಾಕ್ಷಿ. ಈಗ ಅನುಕಂಪ ಗಿಟ್ಟಿಸಿಕೊಳ್ಳಲು ರವಿ ನಾಟಕ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಏನಿಲ್ಲ. ಹೀಗಾಗಿ ರವಿ ಪರ ನಿಂತು ಮಾತನಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ರವಿ ಎನ್‌ಕೌಂಟರ್‌ಗೆ ಪೊಲೀಸರು ಯತ್ನಿಸಿದರು, ಕೊಲೆಗೆ ಯತ್ನ ನಡೆದಿತ್ತು ಎಂಬುದೆಲ್ಲಾ ರವಿ ಅವರು ಮಾಡಿದ ಶುದ್ಧ ನಾಟಕ. ಬಿಜೆಪಿಯವರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳೆಲ್ಲಾ ಕೇವಲ ನಾಟಕ ಎಂದು ಟೀಕೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಚೈನ್ನೈ ಮೂಲದ ಅಮೆರಿಕದ ವಾಣಿಜ್ಯೋದ್ಯಮಿಗೆ ದೊಡ್ಡ ಹುದ್ದೆ ನೀಡಿದ ಡೊನಾಲ್ಡ್ ಟ್ರಂಪ್