Select Your Language

Notifications

webdunia
webdunia
webdunia
webdunia

ಚಿಲುಮೆ ಸಂಸ್ಥೆಗೂ ನನಗೂ ಸಂಬಂಧ ಇಲ್ಲ-ಮಾಜಿ ಶಾಸಕ ನಂದೀಶ್ ರೆಡ್ಡಿ

n
bangalore , ಶನಿವಾರ, 19 ನವೆಂಬರ್ 2022 (21:02 IST)
ಕಾಂಗ್ರೆಸ್ ಆರೋಪಗಳನ್ನ ನಂದಿಶ್ ರೆಡ್ಡಿ ನಿರಾಕರಿಸಿದಾರೆ.2016ರಲ್ಲಿ  ಚಿಲುಮೆ ಸಂಸ್ಥೆಯ  ನನ್ನ ಸಂಪರ್ಕಿಸಿ ಸರ್ವೆ ಮಾಡಿ ಕೊಡೋದಾಗಿ ಹೇಳಿದರು.ಅವರ ಸರ್ವೆ ಆಕ್ಯುರಸಿ ಕರೆಕ್ಟಾಗಿ ಇರುತ್ತೆ ಅಂದ್ರು.ನಾನು ಇದರಲ್ಲಿ ಬಂಡವಾಳ ಹೂಡಿದ್ದೇನೆ ಅಂತ ಸುಳ್ಳು ಆರೋಪ‌ ಮಾಡಲಾಗಿದೆ.ನನ್ನ ಕ್ಷೇತ್ರದ ಸರ್ವೇಗೆ  18 ಲಕ್ಷ ಹಣ ನೀಡಿದ್ದೇನೆ, ಎಲ್ಲವು ಚೆಕ್ ಮೂಲಕ ನೀಡಿದ್ದೆನೆ.ನಾನು ಇದರಲ್ಲಿ ಪಾರ್ಟನರ್ ಆಗಿಲ್ಲ, ಬಂಡವಾಳ ಹೂಡಿಲ್ಲ.ಕೆ ಆರ್ ಪುರಂ ಕ್ಷೇತ್ರದ ಮತದಾರರ ಮಾಹಿತಿ‌ ಕೇಳಿದ್ದೆ.ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸರಿ ಇದೆಯಾ? ಕ್ಷೇತ್ರದ ವಾತಾವರಣ ನಮಗೆ ಪೂರಕ ಇದ್ಯಾ ಅಂತ ಸರ್ವೆ ಮಾಡಿಸಿದ್ದೆ ಅಂತಾ ಸ್ಪಷ್ಟೀಕರಣ ನೀಡಿದ್ದಾರೆ.
 
ಇನ್ನೂ ಇವರು ಸರ್ವೆ ಏಜೆನ್ಸಿ, ಸಾಕಷ್ಟು ಏಜೆನ್ಸಿಗಳೂ ನನಗೆ ಸಂಪರ್ಕಿಸಿದ್ದರು.ನಾನು ಇವರಿಗೆ 18 ಲಕ್ಷ ಪಾವತಿ ಮಾಡಿದ್ದೆ.ಆದ್ರೆ ಈ ಹಣ ಸರ್ವೆಗಾಗಿ ಪಾವತಿ ಮಾಡಿದ್ದು.ಅದರ ಡಾಕ್ಯುಮೆಂಟ್ ಸಹ ನೀಡುತ್ತೇನೆ .ನನ್ನ ಅಕೌಂಟಿಂದನೆ ಚೆಕ್ ಮೂಲಕ ನೀಡಿದ್ದೇನೆ.ಕೆ ಆರ್ ಪುರಂನಲ್ಲಿ ಆಗ ನಕಲಿ ಮತದಾರರ ಸೇರ್ಪಡೆ ಮಾಡಲಾಗಿತ್ತು.ಇದರ ವಿರುದ್ಧ ಆಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನೂ ದಾಖಲಿಸಿದ್ದೆ.2018ರ ನಂತರ ನನಗೂ ಚಿಲುಮೆಗೂ ಸಂಬಂಧ ಇಲ್ಲ.ನಾನು ಆ ನಂತರ ಅವರನ್ನು ಮತ್ತೆ ನಾನು ಸಂಪರ್ಕಿಸಲಿಲ್ಲ ಎಂದು ನಂದೀಶ್ ರೆಡ್ಡಿ  ಹೇಳಿದ್ದಾರೆ.
 
ಚಿಲುಮೆಯವರ ಸರ್ವೆಯ ಮಾಹಿತಿ ನನಗೆ ಪೂರಕವಾಗಿರಲಿಲ್ಲ.ಕಾಂಗ್ರೆಸ್ ನವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದಾರೆ.ಈ ಆರೋಪಕ್ಕೂ ನನಗೂ ಸಂಬಂಧ ಇಲ್ಲ.ನಾನು ನಾಲ್ಕು ವರ್ಷಗಳ ಹಿಂದೆಯೇ ಅವರ ಜತೆ ಸಂಪರ್ಕ ಕಡಿದುಕೊಂಡಿದ್ದೇನೆ.ಚಿಲುಮೆ ಜತೆ ಯಾವುದೇ ವ್ಯವಹಾರವಿಲ್ಲ ನನಗೆ.ಕೇಂದ್ರದ ಆಶಯದಂತೆ ಮತದಾರ ಪಟ್ಟಿಗೆ ಆಧಾರ್ ಲಿಂಕ್ ಆಗಬೇಕು.ಇದರ ಬಗ್ಗೆ ತನಿಖೆ ಮಾಡಿಸಿದರೆ ಅವರು ಎಷ್ಟು ನಕಲಿ ವೋಟರ್ ಕಾರ್ಡ್ ಮಾಡಿಸಿದ್ದಾರೆ ಅಂತ ಬಯಲಾಗುತ್ತೆ ಎಂದು ನಂದೀಶ್ ರೆಡ್ಡಿ ಆರೋಪಗಳನ್ನೆಲ್ಲ ತಳಿಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ