Select Your Language

Notifications

webdunia
webdunia
webdunia
webdunia

ಸೋಲಿನ ಭಯ ನನಗಿಲ್ಲ: ಹೊರಟ್ಟಿ

basavaraja horatti bjp jds ಬಸವರಾಜ ಹೊರಟ್ಟಿ ಬಿಜೆಪಿ ಜೆಡಿಎಸ್
bengaluru , ಗುರುವಾರ, 26 ಮೇ 2022 (22:10 IST)
ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಸೋಲಿನ ಭಯದಿಂದ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ ಎಂದರು.
ಬಿಜೆಪಿ ಇನ್ನೂ ಹಲವರು ಬರುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿಗೆ ಇನ್ನೂ ಹಲವರು ಬರುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರೆ ಅದು ಅಧಿಕೃತ ವ್ಯಕ್ತಿ ಹೇಳಿದಂತೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ: ಡಿ.ಕೆ. ಸುರೇಶ್