Publish Date: Thu, 26 May 2022 (16:43 IST)
Updated Date: Thu, 26 May 2022 (16:46 IST)
ನೀರಿನ ಟ್ಯಾಂಕರ್ ಗುದ್ದಿ 5 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಕಲ್ಲಿ ಸಂಭವಿಸಿದೆ.
ಸರ್ಜಾಪುರ ರಸ್ತೆಯ ಸೆರೆನಿಟಿ ಬಡವಾಣೆಯಲ್ಲಿ ಈ ಘಟನೆ ಸಂಭವಿಸಿದ್ದು, ಬಾಲಕ ಪ್ರತಿಷ್ಠ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಾಟರ್ ಟ್ಯಾಂಕರ್ ರಿವರ್ಸ್ ತೆಗೆಯುವಾಗ ಚಾಲಕನ ಅಜಾಗರೂಕತೆಯಿಂದಾಗಿ ಹಿಂದೆ ಆಡುತ್ತಿದ್ದ ಬಾಲಕನ ಮೇಲೆ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಘಟನೆ ಸಂಬಂಧ ಎಚ್ ಎಸ್ ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.