Select Your Language

Notifications

webdunia
webdunia
webdunia
webdunia

ಶಿಕ್ಷಣ ಸಚಿವ ಸ್ಥಾನದ ಆಕಾಂಕ್ಷಿ ನಾನೇ ಎಂದ ಹೊರಟ್ಟಿ

ಶಿಕ್ಷಣ ಸಚಿವ ಸ್ಥಾನದ ಆಕಾಂಕ್ಷಿ ನಾನೇ ಎಂದ ಹೊರಟ್ಟಿ
ಧಾರವಾಡ , ಶನಿವಾರ, 4 ಮೇ 2019 (18:11 IST)
ಮೈತ್ರಿ ಸರ್ಕಾರದಲ್ಲಿ ಮಂತ್ರಿ ಮಾಡದೇ ಇರುವುದು ನನಗೆ ಅಲರ್ಜಿ. ನಾನು ಶಿಕ್ಷಣ ಇಲಾಖೆ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ರಾಜ್ಯಕ್ಕೆ ಶಿಕ್ಷಣ ಮಂತ್ರಿ ಒಳ್ಳೆಯ ಸ್ಥಾನವಿತ್ತು. ಆದರೆ ನನಗೆ ಮಂತ್ರಿ ಮಾಡಬೇಕಿತ್ತು ಆದ್ರೆ  ಮಾಡಲಿಲ್ಲಾ ಅಂತ ಹಿರಿಯ ಎಂಎಲ್ಸಿ ಮತ್ತೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದು,  ನೀತಿ ಸಂಹಿತೆ ಇರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಿಎಂಗೆ ಬರಲ್ಲ ಎಂದರು.

ಅನಂತಕುಮಾರ ಹೆಗಡೆ ಸರ್ಕಾರ ಬಿಳುವ‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರು ಭವಿಷ್ಯ ಯಾವಾಗ ಹೇಳಿದ್ದಾರೆ ಗೊತ್ತಿಲ್ಲ, ಅವರು ಭವಿಷ್ಯ ಹೇಳಿದ್ದರೆ ಎಲ್ಲರನ್ನ ಅವರ ‌ಬಳಿ ಕಳಿಸ್ತೇನೆ ಎಂದು ವ್ಯಂಗ್ಯವಾಡಿದ್ರು.

ಜಿ.‌ಟಿ. ದೇವೇಗೌಡ ಅವರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಹೇಳಿಕೆ ಸರಿಯಲ್ಲ. ಆ ರೀತಿ ಮಾತನಾಡುವ ಅವಶ್ಯಕತೆ ಇರಲಿಲ್ಲ. ನಾನು ಸಿದ್ದರಾಮಯ್ಯನವರ ಜೊತೆ ಇದ್ದೆ. ಈ ‌ಸರ್ಕಾರ ಬೀಳಬಾರದು ಎಂಬ ಅಭಿಪ್ರಾಯ ಎಲ್ಲರದ್ದೂ ಇದೆ ಎಂದರು.

23 ರ ನಂತರ ಸರ್ಕಾರ ಏನಾಗುತ್ತೆ ಗೊತ್ತಿಲ್ಲ. ಆದರೆ ಬಿಜೆಪಿಯವರು 104 ಜನ ಇದ್ದಾರೆ. ಆಗಲೇ ಅವರ ಸರ್ಕಾರ ಮಾಡಲು ಬಿಟ್ಟಿದ್ದರೆ ಬಿಡಬೇಕಿತ್ತು. ಇಲ್ಲಿ ಕೋಮುವಾದಿ ಪಕ್ಷ ಬರಬಾರದು ಎಂಬ ಉದ್ದೇಶದಿಂದ ಮೈತ್ರಿ ಸರ್ಕಾರ ಮಾಡಿದ್ದೇವೆ. ಕೆಲ‌ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡ್ತಾರೆ, ಅವರು ಮೊದಲು ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದ್ರು.

ಏನಿದ್ರು ಸಿಎಂ, ಡಿಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರು ಮತನಾಡಬೇಕು. ತಲೆಗೊಬ್ಬ ಮಾತನಾಡಬಾರದು.
ನನಗೆ ಮಂತ್ರಿ ಮಾಡಿದ್ದರೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತಿದ್ದೆ ಆದರೆ ಮಂತ್ರಿಯಾದ್ರೆ ಸಾಕು ಎಂದುಕೊಂಡಿದ್ದೆ. ನನ್ ನಸೀಬು ಸರಿ ಇಲ್ಲಾ ನಂದು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರ ಪತನಕ್ಕೆ ಬಿಜೆಪಿ ರೆಡಿ ಇದೆ ಎಂದ ಸಚಿವ