Select Your Language

Notifications

webdunia
webdunia
webdunia
webdunia

ನಾನು ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದ ಮಾಜಿ ಶಾಸಕಿ

webdunia
ಶನಿವಾರ, 13 ಅಕ್ಟೋಬರ್ 2018 (14:43 IST)
ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ನಾನು ಜೆಡಿಎಸ್ ನ ಟಿಕೆಟ್ ನ ಆಕಾಂಕ್ಷಿಯಾಗಿದ್ದೇನೆ. ಹೀಗಂತ ಮಾಜಿ ಶಾಸಕಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಜಿ ಶಾಸಕಿ ಪ್ರಭಾವತಿ ಜಯರಾಂ ಹೇಳಿಕೆ ನೀಡಿದ್ದು, ನಾನು ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಟಿಕೆಟ್ ನೀಡುವ ಭರವಸೆ ಇದೆ ಎಂದಿದ್ದಾರೆ.

ಪತಿ ಎಸ್‌.ಡಿ.ಜಯರಾಂ ಮಾಡಿರುವ ಅಭಿವೃದ್ದಿ ಕಾರ್ಯಗಳು, ಅವರ ನಾಯಕತ್ವ ಇನ್ನೂ ಮನೆ ಮಾತಾಗಿವೆ.
ಉಪ ಚುನಾವಣೆಗಾಗಲಿ, ಸಾರ್ವತ್ರಿಕ ಚುನಾವಣೆಗಾಗಲಿ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

2003 ರಲ್ಲಿ ಎಸ್.ಎಂ.ಕೃಷ್ಣ ಸಹೋದರ ಶಂಕರ್ ವಿರುದ್ದ ಯಾರು ಎಂ.ಎಲ್.ಸಿ. ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡಲಿಲ್ಲ.  ಅದ್ರೆ ನಾನು ಜೆಡಿಎಸ್ ನಾಯಕರ ಮಾತಿಗೆ ಬೆಲೆ ಕೊಟ್ಟು ಎಂ‌ಎಲ್‌ಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ.
ಪತಿ ಜಯರಾಂ ಸಾವಿನ ಬಳಿಕ ಈವರೆಗೂ ಪಕ್ಷದ ಅಭಿವೃದ್ದಿಗೆ ದುಡಿಯುತ್ತಿದ್ದೇವೆ ಎಂದರು.

ನನಗಾದರೂ ಸರಿ, ಇಲ್ಲವೆ ನನ್ನ ಮಗ ಅಶೋಕ್ ಜಯರಾಂಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇವೆ.
ನಾಳೆ ಅಂತಿಮವಾಗಿ ಟಿಕೆಟ್ ಹಂಚಿಕೆ ಫೈನಲ್ ಆಗಲಿದೆ ಎಂದರು. ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧ ಅಂತ ಮಾಜಿ ಶಾಸಕಿ ಹೇಳಿದ್ದಾರೆ.ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದ ಸಚಿವ