Select Your Language

Notifications

webdunia
webdunia
webdunia
webdunia

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ಶಾಸಕ ಜಿ.ಟಿ.ದೇವೇಗೌಡ

Sampriya

ಮೈಸೂರು , ಬುಧವಾರ, 9 ಜುಲೈ 2025 (18:05 IST)
ಮೈಸೂರು:  ನಾನು ಜೆಡಿಎಸ್‌ನಲ್ಲಿ ಇರಬೇಕಾ ಬೇಡವಾ ಅಥವಾ ಬಿಜೆಪಿಗೆ ಹೋಗಬೇಕಾ ಬೇಡವಾ ಅಥವಾ ಕಾಂಗ್ರೆಸ್‌ಗೆ ಹೋಗಬೇಕಾ ಎಂದು ನನ್ನ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ನಾನು ಪಕ್ಷಾಂತರ ಮಾಡಲ್ಲ ಎಂದು ಶಾಸಕ ಜಿಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬಂದುಬಿಡು ಅಂತ ಕರೆದಿಲ್ಲ. ಡಿಕೆ ಶಿವಕುಮಾರ್‌ ಕೂಡ ಕರೆದಿಲ್ಲ. ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ನನ್ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ.  ಕಾಂಗ್ರೆಸ್ ಬಿಜೆಪಿ, ಜೆಡಿಎಸ್‌ ಯಾರೂ ನನ್ನನ್ನು ಕರೆದಿಲ್ಲ. ಸದ್ಯಕ್ಕೆ ನನ್ನದು ತಟಸ್ಥ ನಿಲುವು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದೇನೆ. ಸಿದ್ದರಾಮಯ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆಗಿದ್ದಾಗ, ಈಗ ಮುಖ್ಯಮಂತ್ರಿ ಆಗಿರುವಾಗ ಕ್ಷೇತ್ರದಲ್ಲಿ ನಾನು ಯಾವ ರೀತಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎನ್ನುವುದು ಬೇರೆ ಶಾಸಕರಿಗೆ ಗೊತ್ತಿಲ್ಲ. ದೊಡ್ಡ ನಾಯಕನ (ಸಿದ್ದರಾಮಯ್ಯ) ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಕ್ಷೇತ್ರವಿದು ಎಂದು ಹೇಳಿದರು.

ನನ್ನನ್ನು ಚನ್ನಪಟ್ಟಣ ಉ‍ಪ ಚುನಾವಣೆ ವೇಳೆ ಕರೆದಿದ್ದರಾ? ಇವತ್ತು ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಹೋದಾಗ ಉಳಿದುಕೊಂಡವರು ಯಾರು? ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿದೆಯಾ? ಯಾವುದೋ ಕಾರಣಕ್ಕೆ ಪಕ್ಷಕ್ಕೆ ಬಂದು, ಸಣ್ಣ ಅಧಿಕಾರ ಹಿಡಿದುಕೊಂಡಿರುವ ನಿಮಗೆ ಈ ಜಿ.ಟಿ. ದೇವೇಗೌಡನನ್ನು ಎದುರಿಸುವ ಶಕ್ತಿ ಇದೆಯೇ ಎಂದು ಯಾರಾ ಹೆಸರು ಹೇಳದೆ ಪ್ರಶ್ನೆ ಮಾಡಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ