Select Your Language

Notifications

webdunia
webdunia
webdunia
webdunia

ಮಾಶಾ ಘರ್ ಖ್ಯಾತಿಯ ಪಾಕ್‌ ನಟಿ ಹುಮೈರಾ ಅಸ್ಗರ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

ಮಾಡೆಲ್ ಹುಮೈರಾ ಅಸ್ಗರ್ ಅಲಿ ಇನ್ನಿಲ್ಲ

Sampriya

ನವದೆಹಲಿ , ಬುಧವಾರ, 9 ಜುಲೈ 2025 (16:03 IST)
Photo Credit X
30ವರ್ಷದ ಪಾಕಿಸ್ತಾನಿ ನಟಿ ಮತ್ತು ಮಾಡೆಲ್ ಹುಮೈರಾ ಅಸ್ಗರ್ ಅಲಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿಯಾಲಿಟಿ ಟಿವಿ ಸರಣಿ ತಮಾಶಾ ಘರ್ ಮತ್ತು ಪಾಕಿಸ್ತಾನಿ ಚಲನಚಿತ್ರ ಜಲೈಬೀಯಲ್ಲಿ ಇವರು ಅಭಿನಯಿಸಿದ್ದಾರೆ. 

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ನಟಿ ಕರಾಚಿಯ ಡಿಫೆನ್ಸ್ ಏರಿಯಾದಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಸಾವನ್ನಪ್ಪಿದ ಸುಮಾರು ಮೂರು ವಾರಗಳ ನಂತರ ಶವವಾಗಿ ಪತ್ತೆಯಾಗಿದ್ದಾಳೆ.

ಹುಮೈರಾ ಅಸ್ಗರ್ ಅಲಿ ಕಳೆದ ಕೆಲವು ವರ್ಷಗಳಿಂದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸಿಕ್ಕಿರುವ ಮಾಹಿತಿ ಪ್ರಕಾರ ಆಕೆಯ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗ್ರಹಿಸಿದ ನಂತರ ಆಕೆಯ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮುಂಜಾನೆ 3 ಗಂಟೆ ಸುಮಾರಿಗೆ ಸಹ ನಿವಾಸಿಗಳಿಂದ ಪೊಲೀಸರಿಗೆ ಕರೆ ಬಂದಿತು, ನಂತರ ಅವರು ಹುಮೈರಾ ಅಸ್ಗರ್ ಅಲಿ ಅವರ ಮನೆಗೆ ಹೋದರು. ಯಾರೂ ಉತ್ತರಿಸದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಒಡೆದರು. ಪೊಲೀಸರು ಅಪಾರ್ಟ್‌ಮೆಂಟ್‌ಗೆ ಹೋಗಿ ನೋಡಿದಾಗ ಮಹಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಆರಂಭಿಕ ವರದಿಗಳ ಪ್ರಕಾರ, ಹುಮೈರಾ ಅಸ್ಗರ್ ಅಲಿ ಅವರ ಸಾವನ್ನು ಸಹಜ ಸಾವು ಎಂದು ಪರಿಗಣಿಸಲಾಗಿದೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ