Publish Date: Mon, 21 Oct 2019 (19:24 IST)
Updated Date: Mon, 21 Oct 2019 (19:26 IST)
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಬಿ.ಸಿ.ಪಾಟೀಲ್ ತೀವ್ರ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರೋ ಬಿ.ಸಿ.ಪಾಟೀಲ್, ನನನ್ನು ಖರೀದಿ ಮಾಡೋಕೆ ನಾನೇನೂ ಕುರಿ, ಕೋಳಿ ಅಲ್ಲ. ಖರೀದಿ ಮಾಡೋದು ಹಾಗೂ ಮಾರಾಟ ಮಾಡೋದು ಸಿದ್ದರಾಮಯ್ಯರಿಗೆ ಚೆನ್ನಾಗಿ ಗೊತ್ತಿದೆ ಅಂತೆಲ್ಲಾ ಟಾಂಗ್ ನೀಡಿದ್ದಾರೆ.
ಬಿಜೆಪಿಯವರು ಅನರ್ಹ ಶಾಸಕರನ್ನು ದನ, ಕೋಳಿ, ಕುರಿಗಳಂತೆ ಖರೀದಿ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ನೀಡಿರೋ ಹೇಳಿಕೆ ಬಿ.ಸಿ.ಪಾಟೀಲ್ ಕಿಡಿಕಾರಿದ್ದಾರೆ.
ಕೀಳುಮಟ್ಟದ ಹೇಳಿಕೆಯು ಸಿದ್ದರಾಮಯ್ಯನವರ ಸಂಸ್ಕೃತಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಅಂತ ಪಾಟೀಲ್ ವ್ಯಂಗ್ಯವಾಡಿದ್ದಾರೆ.