Webdunia - Bharat's app for daily news and videos

Install App

ತಾಳಿ ಕಟ್ಟುವಾಗ ಹೈಡ್ರಾಮಾ ಮಾಡಿದ ವಧು! ಮುಂದೇನಾಯ್ತು?

Webdunia
ಭಾನುವಾರ, 22 ಮೇ 2022 (14:51 IST)
ಮೈಸೂರು : ಪ್ರೀತಿಸಿದ ಹುಡಗನನ್ನೆ ಕೈ ಹಿಡಿಯಬೇಕು ಎಂದು ನಿರ್ಧರಿಸಿದ್ದ ಯುವತಿ, ಪೋಷಕರ ಒತ್ತಾಯದಿಂದ ಬೇರೆ ಯುವಕನ ಜೊತೆ ಹಸೆಮಣೆ ಏರಿ ಇನ್ನೇನೂ ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಮೆಗಾ ಡ್ರಾಮಾ ಮಾಡಿದ್ದಾಳೆ.
 
ಆ ಡ್ರಾಮಾದ ಅಸಲಿಯತ್ತು ತಿಳಿದು ವರನ ಕಡೆಯವರು ಫುಲ್ ಗರಂ ಆಗಿ ಗದ್ದಲ ನಡೆಸಿದ ಘಟನೆ ಮೈಸೂರಲ್ಲಿ ನಡೆದಿದೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿಯ ಯುವತಿ, ಹೆಚ್.ಡಿ.ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ನಿನ್ನೆ ಸಂಜೆ ರಿಸೆಪ್ಷನ್ ಕೂಡ ನಡೆದಿತ್ತು. ವಧು, ವರ ಎರಡು ಕಡೆಯ ಅಪಾರ ಬಂಧುಗಳು ಮದುವೆಗೆ ಬಂದಿದ್ದರು. ಇವತ್ತು ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ತಾಳಿ ಕಟ್ಟುವ ಕ್ಷಣವೂ ಬಂದು ಬಿಡ್ತು. ಆಗಲೇ ವಧುವಿನ ಡ್ರಾಮಾ ಶುರುವಾಯ್ತು. 

ತಾಳಿಗೆ ಕೊರಳೊಡ್ಡುವ ಕ್ಷಣದಲ್ಲೇ ಯುವತಿ ಕುಸಿದು ಬಿದ್ದಿದ್ದಾಳೆ. ಆಗ ಯುವತಿ ವಿಚಾರಿಸಿದ್ದಾಗ ಪ್ರೀತಿಯ ವಿಚಾರ ಹೇಳಿದ್ದಾಳೆ. ನಾನು ಪ್ರೀತಿಸಿದ ಯುವಕನನ್ನೆ ಮದುವೆಯಾಗುತ್ತೇನೆಂದು ಯುವತಿ ಹೇಳಿದಾಗ ವರನ ಕಡೆಯವರಿಗೆ ಶಾಕ್ ಆಗಿದೆ.

ಕೆಲ ದಿನಗಳ ಹಿಂದೆಯೇ ಯುವತಿ ಪ್ರಿಯಕರ, ಆಕೆ ಮದುವೆಯಾಗುತ್ತಿದ್ದ ಯುವಕನಿಗೆ ಮೆಸೇಜ್ ಕಳಿಸಿ ಮದುವೆ ಆಗಬೇಡ. ಆಕೆ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದ. ಆದರೆ ವರ ಇದನ್ನು ನಿರ್ಲಕ್ಷಿಸಿ ಮದುವೆಗೆ ಮುಂದಾಗಿದ್ದ. ಯಾವಾಗ ಮೆಸೇಜ್ಗೂ ವರ ಬಗ್ಗದಿದ್ದಾಗ ಯುವತಿಯೇ ಕೊನೆ ಕ್ಷಣದಲ್ಲಿ ಈ ಹೈಡ್ರಾಮಾ ಮಾಡಿ ಮದುವೆಯಿಂದ ತಪ್ಪಿಸಿಕೊಂಡಿದ್ದಾಳೆ. 

ವಿಚಾರ ತಿಳಿಯುತ್ತಲೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ವಧುವಿನ ಪೋಷಕರಿಗೆ ಛೀಮಾರಿ ಹಾಕಿದ್ದಾರೆ. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ವೆಚ್ಚ ಮಾಡಲಾಗಿದೆ. ಎಲ್ಲಾ ಖರ್ಚು ಕಟ್ಟಿಕೊಡಿ ಎಂದು ವರನ ಕುಟುಂಬ ಗಲಾಟೆ ಮಾಡಿತು. ಇದರಿಂದ ಕಲ್ಯಾಣ ಮಂಟಪದಲ್ಲಿ ಗದ್ದಲ ಮನೆ ಮಾಡಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ವರ-ವಧು ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಯುವತಿ ಮಾಡಿದ ಈ ಡ್ರಾಮಾದಿಂದ ಯುವತಿಯ ಪೋಷಕರಂತೂ ತಲೆತಗ್ಗಿಸಿದ್ದಾರೆ.

ನಂತರ ವಧು-ವರರ ಪೋಷಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುಗೆ ನೀಡಿದ ಆಭರಣವನ್ನು ವರನ ಪೋಷಕರು ವಾಪಸ್ ಪಡೆದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments