Select Your Language

Notifications

webdunia
webdunia
webdunia
webdunia

ಮರಕ್ಕೆ ಕ್ರೂಸರ್ ಡಿಕ್ಕಿ: ಮದುವೆ ಹೊರಟ್ಟಿದ್ದ 3 ಮಕ್ಕಳು ಸೇರಿ 9ಕ್ಕೇರಿದ ಸಾವಿನ ಸಂಖ್ಯೆ

ಮರಕ್ಕೆ ಕ್ರೂಸರ್ ಡಿಕ್ಕಿ: ಮದುವೆ ಹೊರಟ್ಟಿದ್ದ 3 ಮಕ್ಕಳು ಸೇರಿ 9ಕ್ಕೇರಿದ ಸಾವಿನ ಸಂಖ್ಯೆ
bengaluru , ಶನಿವಾರ, 21 ಮೇ 2022 (16:07 IST)

ಮರಕ್ಕೆ ಕ್ರೂಸರ್ ಡಿಕ್ಕಿ ಹೊಡೆದು ಮೂವರು ಮಕ್ಕಳು ಸೇರಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿಟ್ಟು 11 ಮಂದಿ ಗಾಯಗೊಂಡ ಆಘಾಕರಾಗಿ ಘಟನೆ ಧಾರವಾಡದ ಬಾಡಾ ಗ್ರಾಮದ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ.

ಶನಿವಾರ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನಸೂರ ಗ್ರಾಮದಿಂದ ಬೆನಕನಟ್ಟಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಅನಾಹುತ ಸಂಭವಿಸಿದೆ. ಮೃತರನ್ನು ಮಹೇಶ್ವರಯ್ಯ (11), ಅನನ್ಯ (14), ಹರೀಶ್ (12), ಶಿಲ್ಪಾ (34), ನೀಲವ್ವ(60), ಮಧುಶ್ರೀ (20) ಹಾಗೂ ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಬೆನ್ನಲ್ಲೇ ಕ್ರೂಸರ್ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ