ಪತ್ನಿಯ ರೊಮ್ಯಾಟಿಕ್ ವಿಡಿಯೋ ಜಾಲತಾಣಗಳಲ್ಲಿ ಹರಿಬಿಟ್ಟಿದ್ದವನ ವಿರುದ್ಧ ದೂರು ನೀಡಿ ಪ್ರಾಣ ಕಳೆದುಕೊಂಡ ಪತಿ

Webdunia
ಶುಕ್ರವಾರ, 24 ಮೇ 2019 (09:40 IST)
ಬೆಂಗಳೂರು : ಪತ್ನಿ ಪರಪುರುಷನ ಜೊತೆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಹಿನ್ನಲೆಯಲ್ಲಿ ದೂರು ನೀಡಿದ್ದಕ್ಕೆ ಪತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.




ಕಬಾಬ್ ಅಂಗಡಿ ಮಾಲೀಕನ ಪತ್ನಿಯೊಂದಿಗೆ ಕಿಶೋರ್  ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ  ಪತಿಗೆ ಗೊತ್ತಾಗಿ ಪತ್ನಿಗೆ ಬುದ್ಧಿಮಾತು ಹೇಳಿದ್ದಕ್ಕೆ ಆಕೆ ಆತನನ್ನು ಬಿಟ್ಟುಹೋಗಿದ್ದಾಳೆ. ನಂತರ ಕಿಶೋರ್ ಆಕೆಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ವಿಚಾರ ತಿಳಿದ ಪತಿ ರಾಜಗೋಪಾಲ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕಿಶೋರ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಕಿಶೋರ್ ಜೈಲಿನಿಂದ ಬಂದ ತಕ್ಷಣ ತನ್ನ ಸಹಚರರೊಂದಿಗೆ ಸೇರಿ ಕಬಾಬ್ ಅಂಗಡಿ ಮಾಲೀಕನನ್ನು ಕೊಲೆ ಮಾಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ರಾಜಗೋಪಾಲನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಶೋರ್ ನನ್ನು  ಸೇರಿ ನಾಲ್ವರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭ್ರಷ್ಟಾಚಾರ ನಮ್ಮ ಕಾಲದ್ದಾ, ನಿಮ್ಮ ಕಾಲದ್ದಾ: ಸಿದ್ದರಾಮಯ್ಯಗೆ ದಾಖಲೆ ನೀಡಿದ ಆರ್ ಅಶೋಕ್

ಬಿಜೆಪಿ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೊರಟಿದೆ: ಸಿಎಂ ಸಿದ್ದರಾಮಯ್ಯ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪಾಕಿಸ್ತಾನ ಸಂಸತ್ತಿನೊಳಗೆ ಎಂಟ್ರಿ ಕೊಟ್ಟ ಕತ್ತೆ: ಫುಲ್ ಕಾಮಿಡಿ ವಿಡಿಯೋ

ಇಂಡಿಗೋ ಅವ್ಯವಸ್ಥೆ... ಮಗಳಿಗೆ ಪ್ಯಾಡ್ ಬೇಕು ಎಂದು ಸಿಬ್ಬಂದಿ ಬಳಿ ಅಂಗಲಾಚಿದ ತಂದೆ Video

ಮುಂದಿನ ಸುದ್ದಿ