ಬಿಜೆಪಿಗೆ ಮತ ಹಾಕಿದಕ್ಕೆ ಪತ್ನಿಯನ್ನೇ ಕೊಂದ

ಮಂಗಳವಾರ, 21 ಮೇ 2019 (12:00 IST)
ಗಾಜಿಪುರ : ಬಿಜೆಪಿಗೆ ಮತ ಹಾಕಿದಕ್ಕೆ ಪತಿಯೊಬ್ಬ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಗಾಜಿಪುರದ ತರವಾನಿಯಾ ಗ್ರಾಮದಲ್ಲಿ ನಡೆದಿದೆ.
ನೀಲಮ್ ಕೊಲೆಯಾದ ಪತ್ನಿ, ರಾಂಬಚನ್ ಕೊಲೆ ಮಾಡಿದ ಪತಿ. ರಾಂಬಚನ್ ತನ್ನ ಪತ್ನಿ ನೀಲಮ್ ಗೆ ಬಿಜೆಪಿಗೆ ಮತ ಹಾಕದಂತೆ ಹೇಳಿದ್ದಾನಂತೆ. ಆದರೆ ಆಕೆ ಬಿಜೆಪಿಗೆ ಮತ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಆತ ಪತ್ನಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.


ಈ ಘಟನೆಯನ್ನು ಕಂಡು ಸ್ಥಳೀಯರು ಸೇರಿದ ಹಿನ್ನಲೆಯಲ್ಲಿ ರಾಂಬಚನ್ ಅಲ್ಲಿಂದ ತೆರಳಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದ ಎಮ್ಮೆ. ಆಮೇಲೆ ಅಲ್ಲಿ ನಡೆದದ್ದೇನು ಗೊತ್ತಾ?