ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದ ಎಮ್ಮೆ. ಆಮೇಲೆ ಅಲ್ಲಿ ನಡೆದದ್ದೇನು ಗೊತ್ತಾ?

ಮಂಗಳವಾರ, 21 ಮೇ 2019 (11:56 IST)
ರಾಯಚೂರು : ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಇದೀಗ ನೀರು ಕುಡಿಯಲು ಬಂದ ಎಮ್ಮೆಯೊಂದರ ಕಾಲನ್ನು ಕಿತ್ತು ತಿಂದ ಘಟನೆ ರಾಯಚೂರಿನ ದೇವಸುಗೂರು ಬಳಿ ನಡೆದಿದೆ.
ದೇವಸುಗೂರು ಗ್ರಾಮದ ಶೀನಪ್ಪ ಎಂಬವರ ಎಮ್ಮೆ ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದಿದೆ. ಆಗ ಮೊಸಳೆಯೊಂದು ಅದರ ಮೇಲೆ ದಾಳಿ ಮಾಡಿ ಕಾಲನ್ನೇ ಕಿತ್ತುಕೊಂಡಿದೆ.

ಎಮ್ಮೆ ಮೇಲೆ ಮೊಸಳೆ ದಾಳಿ ಮಾಡುತ್ತಿರುವ ದೃಶ್ಯವನ್ನು ದನಗಾಯಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಘಟನೆ ನಡೆದ ಬಳಿಕ ದನಗಾಯಿಗಳು ನದಿ ಹತ್ತಿರ ಜಾನುವಾರುಗಳನ್ನ ಕರೆದೊಯ್ಯಲು ಹಿಂದೇಟು ಹಾಕುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಹೊರನಡೆಯುತ್ತೇನೆ ಎಂದ ಮಾಜಿ ಸಚಿವ ರೋಷನ್ ಬೇಗ್