Select Your Language

Notifications

webdunia
webdunia
webdunia
webdunia

ಸ್ವಚ್ಛತೆಗೆ ರೋಸಿ ಡೈವೋರ್ಸ್ ಮುಂದಾದ ಪತಿ!

ಸ್ವಚ್ಛತೆಗೆ ರೋಸಿ ಡೈವೋರ್ಸ್ ಮುಂದಾದ ಪತಿ!
ಬೆಂಗಳೂರು , ಶುಕ್ರವಾರ, 3 ಡಿಸೆಂಬರ್ 2021 (11:48 IST)
ಬೆಂಗಳೂರು : ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡೆದುಕೊಳ್ಳು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಸಿಡಿ ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಲ್ಯಾಪ್ಟಾಪ್, ಸೆಲ್ಫೋನ್ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ರೋಸಿರುವ ಪತಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್ಗೆ ಶಿಫಾರಸು ಮಾಡಿದ್ದಾರೆ.
ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್ಫೋನ್ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ. 
ಲಂಡನ್ನಿಂದ ಬೆಂಗಳೂರಿಗೆ ವಾಪಸ್ ಆಗಿರುವ ದಂಪತಿ ಕೌಟುಂಬಿಕ ಸಮಾಲೋಚನೆಗೆ ಬಳಗಾಗುತ್ತಾರೆ. ಈ ವೇಳೆ ಈ ಸ್ಚಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ 2ನೇ ಮಗು ಜನಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಸುಮಾಳಿಗೆ ಈ ಸ್ಚಚ್ಛತೆಯ ಗೀಳು ಮತ್ತಷ್ಟು ಹೆಚ್ಚಾಗುತ್ತದೆ.
ಮನೆಯನ್ನು ಪದೇ ಪದೇ ಸ್ಯಾನಿಟೈಸ್ ಮಾಡುವುದು ಮನೆಯ ಪೀಠೋಪಕರಣಗಳು, ಚಮಚ, ಪ್ಲೋರ್ ಮ್ಯಾಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. 
ಲಾಕ್ಡೌನ್ ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ಣಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ ಎಂದಿದ್ದಾನೆ. ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ. ಈ ಘಟನೆ ಬಳಿಕ ಸುಮಾಳ ಸ್ವಚ್ಛತೆಗೀಳು ಉಚ್ಟ್ರಾಯ ಸ್ಥಿತಿಗೆ ತಲುಪುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಓಮಿಕ್ರಾನ್ ಸಂಖ್ಯೆ 3ಕ್ಕೆ ಏರಿಕೆ?