ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿಗೆ ಹೃದಯಾಘಾತವಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ತಳವಾರ್ರ ಪತ್ನಿ ಹೊನ್ನಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ರು. ಪತ್ನಿ ಸಾವಿನ ಸುದ್ದಿ ತಿಳಿದ ಶಿವಪ್ಪಗೆ ಹೃದಯಾಘಾತವಾಗಿದೆ. ಪತ್ನಿ ಸಾವನ್ನಪ್ಪಿದ ಮೂರು ಗಂಟೆಯಲ್ಲಿಯೇ ಪತಿಯು ಸಾವನಪ್ಪಿದ್ದು, ಸಂಬಂಧಿಕರು ಕಂಬನಿ ಮಿಡಿದಿದ್ದಾರೆ. ಸತಿ-ಪತಿಗಳು ಬಹಳ ಅನ್ಯೋನ್ಯದಿಂದ ಜೀವನ ಸಾಗಿಸ್ತಿದ್ರು. ಪತಿ, ಪತ್ನಿಯ ಅಂತ್ಯಸಂಸ್ಕಾರವನ್ನು ಜೊತೆಯಲ್ಲಿಯೇ ಮಾಡಲು ಸಂಬಂಧಿಕರು ತೀರ್ಮಾನ ಮಾಡಿದ್ದಾರೆ.