ಕಾಂತಾರ’ ಮೆಚ್ಚಿದ ನಿರ್ಮಲಾ ಸೀತಾರಾಮನ್

Webdunia
ಗುರುವಾರ, 3 ನವೆಂಬರ್ 2022 (18:10 IST)
ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್​ನಲ್ಲಂತೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ನೋಡಿದ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನವನ್ನು ಎಲ್ಲರೂ ಹೊಗಳಿದ್ದಾರೆ. ಈಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸರದಿ. ನಿರ್ಮಲಾ ಅವರು ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸಿನಿಮಾ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ. ಇದರಿಂದ ಕಾಂತಾರ ತಂಡ ಖುಷಿಯಾಗಿದೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಕೆಲಸಗಳ ಮಧ್ಯೆಯೂ ಬೆಂಗಳೂರಿನ ಗರುಡ ಮಾಲ್​ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿದ ನಂತರದ ಫೋಟೋವನ್ನು ಹಂಚಿಕೊಂಡಿರುವ ನಿರ್ಮಲಾ ಅವರು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.  ರಿಷಬ್ ಅವರೇ ಸಿನಿಮಾನ ಉತ್ತಮವಾಗಿ ಮಾಡಿದ್ದೀರಿ. ತುಳುನಾಡು ಮತ್ತು ಕರಾವಳಿಯ ಶ್ರೀಮಂತ ಸಂಪ್ರದಾಯವನ್ನು ಚಿತ್ರ ಸೆರೆ ಹಿಡಿದಿದೆ ಎಂದು ನಿರ್ಮಲಾ ಟ್ವೀಟ್ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರ ದೇಣಿಗೆ ವಿವಾದ, ಪ್ರಧಾನ ಮಂತ್ರಿಯವರೇ, ಮೌನ ಮುರಿಯಿರಿ: ಜೈರಾಮ್ ರಮೇಶ್

ಏನೂ ಅರಿಯದ 9ರ ಬಾಲಕಿ ಮೇಲೆ ಮೈಮುಟ್ಟಿ ವಿಕೃತಿ ಮೆರೆದ ಮುದುಕನ ಕತೆ ಮುಗಿಸಿದ ಸ್ಥಳೀಯರು, Video

Karnataka Weather: ರಾಜ್ಯದಲ್ಲಿ ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಪತಿ ಪ್ರಧಾನಿಯಾದರು ಬದಲಾಗದ ಚೆನ್ನಮ್ಮ ಸರಳತೆ, ದೇವೇಗೌಡರ ಕಷ್ಟಕ್ಕೆ ಚಿನ್ನವನ್ನು ಅಡವಿಟ್ಟಿದ್ದರಂತ್ತೆ

ಅಬ್ಬ ಈ ವಿಡಿಯೋ ನೋಡುವಾಗ ಎದೆ ಝಳ್ ಎನಿಸುತ್ತದೆ: ಜಿಪ್‌ಲೈನ್ ಆಡುವಾಗ ತುಂಡಾದ ಹಗ್ಗ, 40 ಅಡಿ ಎತ್ತರದಿಂದ ಬಿದ್ದ ಯುವಕ

ಮುಂದಿನ ಸುದ್ದಿ
Show comments