Publish Date: Sat, 09 Dec 2017 (09:18 IST)
Updated Date: Sat, 09 Dec 2017 (09:22 IST)
ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡ ವ್ಯಕ್ತಿಯೊಬ್ಬ 15 ದಿನಗಳಲ್ಲೇ ಯುವತಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಕಳೆದ 8 ವರ್ಷಗಳಿಂದ ಚಿಕ್ಕಬಳ್ಳಾಪುರ ನಗರದ ಯುವತಿಯನ್ನು ಪ್ರೀತಿಸುತ್ತಿದ್ದ ಬಾಗೇಪಲ್ಲಿ ತಾಲ್ಲೂಕಿನ ಕಲ್ಲಪಲ್ಲಿ ಗ್ರಾಮದ ವಿನೋದ್ ಕುಮಾರ್ ಮದುವೆ ಮಾಡಿಕೊಂಡ ನಂತರ ಯಲಹಂದಲ್ಲಿ ಮನೆ ಮಾಡಿ ಸಂಸಾರ ಆರಂಭಿಸಿದ್ದರು. ಆದರೆ, 15 ದಿನಗಳ ಬಳಿಕೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಈಗ ವಿನೋದ ಪೋಷಕರು ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರೀತಿಸಿ ವಿವಾಹ ಮಾಡಿಕೊಂಡ ಈ ಜೋಡಿ ಜಾತಿ ಬೇರೆ ಬೇರೆಯಾಗಿದ್ದು, ವಿನೋದ್ ಪೋಷಕರ ವಿರೋಧದ ನಡುವೆಯೂ ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ರಂಗಸ್ಥಳದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿ, ಸಬ್ ರಿಜಿಸ್ಟ್ರರ್ ಕಚೇರಿಯಲ್ಲೂ ನೋಂದಣಿ ಮಾಡಿಕೊಂಡಿದ್ದರು.
ಪತಿ ವಿನೋದನನ್ನು ಅವರ ಪೋಷಕರೇ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾಳೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.