Publish Date: Fri, 08 Dec 2017 (08:32 IST)
Updated Date: Fri, 08 Dec 2017 (08:35 IST)
ಪತ್ನಿಯ ಗುಪ್ತಾಂಗವನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಪತಿ ವಿಕೃತಿ ಮೆರೆದಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗಿರುವ ಆರೋಪಿ ರಂಗನಾಥ ಪತ್ನಿಯ ಕೈಕಾಲು ಕಟ್ಟಿಹಾಕಿ ಗುಪ್ತಾಂಗವನ್ನು ಇಸ್ತ್ರಿಯ ಮೂಲಕ ಸುಟ್ಟಿದ್ದಾನೆ. ಖಾಸಗಿ ಬಸ್ ಚಾಲಕನಾಗಿರುವ ಆರೋಪಿ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಮಂಜುಳಾ ಜೊತೆಗೆ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಗರ್ಭಿಣಿ ಮಾಡಿರುವ ಆರೋಪಿಯನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದಾಗಲೆಲ್ಲ ಉಲ್ಟಾ ಹೊಡೆಯುತ್ತಿದ್ದ. ಪೊಲೀಸರಿಗೆ ದೂರು ಕೊಡಲು ಮುಂದಾದಾಗ ಮೊದಲ ಪತ್ನಿಯ ಒಪ್ಪಿಗೆಯ ಮೂಲಕ ಮದುವೆ ಮಾಡಿಕೊಂಡಿದ್ದಾನೆ. ಮದುವೆಯ ನಂತರ ಹಿಂಸೆ ನೀಡುವ ಮೂಲಕ ರಾಕ್ಷಸನಂತೆ ವರ್ತಿಸಿದ್ದಾನೆ.
ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಮಂಜುಳಾ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.