Select Your Language

Notifications

webdunia
webdunia
webdunia
webdunia

ಪತ್ನಿಯ ಒಪ್ಪಿಗೆಯಿಲ್ಲದೇ ಗಂಡ ದೈಹಿಕ ಸಂಪರ್ಕ ಮಾಡುವಂತಿಲ್ಲ: ಹೈಕೋರ್ಟ್

ಪತ್ನಿಯ ಒಪ್ಪಿಗೆಯಿಲ್ಲದೇ ಗಂಡ ದೈಹಿಕ ಸಂಪರ್ಕ ಮಾಡುವಂತಿಲ್ಲ: ಹೈಕೋರ್ಟ್
ಬೆಂಗಳೂರು , ಗುರುವಾರ, 24 ಮಾರ್ಚ್ 2022 (10:39 IST)
ಬೆಂಗಳೂರು: ಪತ್ನಿ ಒಪ್ಪಿಗೆಯಿಲ್ಲದೇ ಗಂಡನೂ ಹೆಂಡತಿ ಜೊತೆಗೆ ಲೈಂಗಿಕ ಸಂಪರ್ಕ ಮಾಡುವಂತಿಲ್ಲ. ಇದೂ ಅತ್ಯಾಚಾರಕ್ಕೆ ಸಮ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ದಂಪತಿಯೊಬ್ಬರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯ ಪೀಠ ಈ ಮಹತ್ವದ ತೀರ್ಪಿತ್ತಿದೆ. ನೇಪಾಳ ಮೂಲದ ಬೆಂಗಳೂರು ನಿವಾಸಿ ದಂಪತಿಗಳ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಈ ಪ್ರಕರಣದಲ್ಲಿ ಗಂಡನ ವಿರುದ್ಧವೇ ಪತ್ನಿ ಅತ್ಯಾಚಾರ ದೂರು ನೀಡಿದ್ದರು.

ವಿವಾಹ ಎಂಬುದು ಪತಿಗೆ ಪತ್ನಿಯ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಲು ನೀಡುವ ಅನುಮತಿಯಲ್ಲ. ವೈವಾಹಿಕ ಅತ್ಯಾಚಾರ ಸಹ್ಯವಲ್ಲ. ಪತಿಯ ಬಲವಂತವು ಸಂವಿಧಾನದ ಅನುಚ್ಛೇದ 14 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತೀರ್ಪಿತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಕೊಲೆ ಮಾಡಿ ನಾಟಕವಾಡಿದವಳು ಕೊನೆಗೂ ಸಿಕ್ಕಿಬಿದ್ದಳು!