Select Your Language

Notifications

webdunia
webdunia
webdunia
webdunia

ಗುಲಾಬ್ ನಿಂದ ಮರುಹುಟ್ಟು ಪಡೆದ ಶಾನ್ ಚಂಡ ಮಾರುತ: ರಾಜ್ಯದಲ್ಲಿ 3 ದಿನ ಭಾರಿ ಮಳೆ

ಗುಲಾಬ್ ನಿಂದ ಮರುಹುಟ್ಟು ಪಡೆದ ಶಾನ್ ಚಂಡ ಮಾರುತ: ರಾಜ್ಯದಲ್ಲಿ 3 ದಿನ ಭಾರಿ ಮಳೆ
bangalore , ಗುರುವಾರ, 30 ಸೆಪ್ಟಂಬರ್ 2021 (21:00 IST)
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡ ಮಾರುತ ಹಾಗೂ ಅದರಿಂದ ಮರುಹುಟ್ಟು ಪಡೆದ ಶಾನ್ ಚಂಡ ಮಾರುತದ ಪ್ರಭಾವ ಅರಬ್ಬಿ ಸಮುದ್ರದ ಮೇಲೂ ಆಗುತ್ತಿದ್ದು, ರಾಜ್ಯದಲ್ಲಿ ಅಕ್ಟೋಬರ್ 1ರಿಂದ ಮುಂದಿನ 3 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ನಾಳೆಯಿಂದ ಅಕ್ಟೋಬರ್ 3ರವರೆಗೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ರಂದು ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. 
 
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಮತ್ತು ಚಿಕ್ಕಬಳ್ಳಾಪುರದಲ್ಲಿ ನಾಳೆ ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಇರಲಿದೆ. 
 
 
ನಗರದಲ್ಲಿ 2 ದಿನ ಮೋಡ ಕವಿದ ವಾತಾವರಣ: 
 
ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಮೋಡ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಗೋವುಗಳ ಸಾಗಣೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ: ಸಚಿವ ಪ್ರಭು ಚವ್ಹಾಣ್