Select Your Language

Notifications

webdunia
webdunia
webdunia
webdunia

ಕಾರ್, ಬೈಕ್ ಗಳ ಮೇಲೆ ಉರುಳಿಬಿದ್ದ ಬೃಹತ್ ಮರ : ಆಗಿದ್ದೇನು?

ಕಾರ್, ಬೈಕ್ ಗಳ ಮೇಲೆ ಉರುಳಿಬಿದ್ದ ಬೃಹತ್ ಮರ : ಆಗಿದ್ದೇನು?
ಹುಬ್ಬಳ್ಳಿ , ಶುಕ್ರವಾರ, 25 ಅಕ್ಟೋಬರ್ 2019 (18:20 IST)
ಭಾರೀ ಗಾತ್ರದ ಮರವೊಂದು ಬೈಕ್ ಗಳ ಮೇಲೆ ಉರುಳಿಬಿದ್ದ ಘಟನೆ ನಡೆದಿದೆ.

ಕಳೆದ ವಾರದಿಂದ ಸುರಿಯುತ್ತಿರೋ ಮಳೆ ಅವಾಂತರಕ್ಕೆ ಬೃಹತ್ ಮರವೊಂದು ಧರೆಗೆ ಉರುಳಿದೆ.

ಹುಬ್ಬಳ್ಳಿಯ  ಸಾಯಿ ಬಾಬಾ ದೇವಸ್ಥಾನದ ಎದುರಿನಲ್ಲಿ ಘಟನೆ  ನಡೆದಿದೆ. ಕಳೆದ ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಬೃಹತ್ ಮರವೊಂದು ಧರೆಗೆ ಉರುಳಿದೆ.

ಪರಿಣಾಮ ಒಂದು ಕಾರು, ಎರಡು ಬೈಕ್ ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೆಲಕಾಲ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಸಾರ್ವಜನಿಕರು ಪರದಾಡುವಂತಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಖದೀಮರ ಬಂಧನ