Publish Date: Thu, 23 Jan 2020 (20:57 IST)
Updated Date: Thu, 23 Jan 2020 (20:58 IST)
ನಟ ರಜನಿಕಾಂತ್ ನೀಡಿರೋ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಡುತ್ತಿರುವಾಗಲೇ, ನಟನಿಗೆ ಹಲವರು ಸಪೋರ್ಟ್ ಮಾಡ್ತಿದ್ದಾರೆ.
ಡಿಎಂಕೆ ಸಂಸ್ಥಾಪಕ ಹಾಗೂ ತಮಿಳು ಸ್ವಾಭಿಮಾನ ಚಳವಳಿಯ ಮುಖಂಡರಾಗಿದ್ದ ರಾಮಸ್ವಾಮಿ ಪರಿಯಾರ್ ಬ್ರಿಟಿಷ್ ನವರ ಏಜೆಂಟ್ ಆದಂತೆ ಕೆಲಸ ಮಾಡಿದ್ದರು. ಅವರ ನೀತಿಯಲ್ಲಿ ಹಲವು ದೋಷಗಳಿದ್ದವು. ಒಡೆದು ಆಳುವುದಕ್ಕೆ ಅವರು ಆದ್ಯತೆ ನೀಡಿದ್ರು ಅಂತೆಲ್ಲ ರಜನಿಕಾಂತ್ ಆರೋಪ ಮಾಡಿದ್ರು.
ನಟ ರಜನಿಕಾಂತ್ ಬೆಂಬಲಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮಾರ್ಕಂಡೇಯ ಕಾಟ್ಜು ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ ರಜನಿಕಾಂತ್ ಹೇಳಿಕೆ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.