Publish Date: Fri, 08 Nov 2019 (18:50 IST)
Updated Date: Fri, 08 Nov 2019 (18:51 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಹಾಗೂ ರಾಜಕಾರಣಿ ರಜನಿಕಾಂತ್ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಯಾವುದೇ ಕಾರಣಕ್ಕೂ ನಾನು ಕೇಸರಿಯಾಗೋದಿಲ್ಲ ಅಂತ ಹೇಳೋ ಮೂಲಕ ಬಿಜೆಪಿ ಸೇರ್ಪಡೆ ವಿಷಯವನ್ನು ತಳ್ಳಿ ಹಾಕಿದ್ದಾರೆ.
ತಿರುವಳ್ಳುವರ್ ಅವರಿಗೆ ತೊಡಿಸಿದಂತೆ ಕೇಸರಿ ವಸ್ತ್ರವನ್ನು ನನಗೆ ತೊಡಿಸೋಕೆ ಆಗೋದಿಲ್ಲ ಅಂತ ರಜನಿಕಾಂತ್ ಗುಟುರು ಹಾಕಿದ್ದಾರೆ.
ಬಿಜೆಪಿಗೆ ಸೇರಿ ಅಂತ ಯಾವುದೇ ಆಫರ್ ಬಂದಿಲ್ಲ. ಕೇವಲ ಗಾಳಿಸುದ್ದಿ ಹರಿದಾಡುತ್ತಿದೆ ಅಂತ ನಟ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.