ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆ ಮಾಡಿದ ಘಟನೆ ಶಿರಸಿಯ ಯಾಣ ಕ್ರಾಸ್ ಬಳಿ ನಡೆದಿದೆ.ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ.
ಉಡದ ಗಾತ್ರವೂ ದೊಡ್ಡದಾದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ನುಂಗಲಾಗದೇ ಅರ್ಧ ನುಂಗಿ ವಾಪಸ್ ಹೊರಹಾಕಿದೆ.
ಕಾಳಿಂಗ ಸರ್ಪದ ಬೇಟೆಯಿಂದ ಉಡವೂ ಸಾವನ್ನಪ್ಪಿದೆ.
ಬೈಕ್ ಸವಾರನಾದ ಸ್ಥಳೀಯ ಅನಂತಮೂರ್ತಿ ಮತ್ತಿಘಟ್ಟ ಎನ್ನುವವರಿಗೆ ಈ ಉಡವನ್ನು ನುಂಗುತ್ತಿರುವ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದ್ದು ಅವರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ