Select Your Language

Notifications

webdunia
webdunia
webdunia
webdunia

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

A person was killed in a forest attack
ಸರಗೂರು , ಶುಕ್ರವಾರ, 12 ಆಗಸ್ಟ್ 2022 (17:57 IST)
ಕಾಡಾನೆ ದಾಳಿಗೆ ಕೇರಳ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಸರಗೂರು ತಾಲೂಕಿನ ಎತ್ತಿಗೆ ಗ್ರಾಮದ ಹೊರವಲಯದ‌ ಜಮೀನಿನಲ್ಲಿ ನಡೆದಿದೆ. ಬಾಲನ್ ಆನೆ ದಾಳಿಗೆ ಬಲಿಯಾದ ರೈತ. ಈತ ಎತ್ತಿಗೆ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದ. ಬೆಳಗ್ಗೆ ಜಮೀನಿನತ್ತ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸುವ ವೇಳೆ ದಾಳಿ ನಡೆಸಿದ ಆನೆ ಇವರನ್ನು ತುಳಿದು ಸಾಯಿಸಿದೆ ಎನ್ನಲಾಗ್ತಿದೆ.ಬೆಳಗಾದರೂ ಅರಣ್ಯ ಸೇರದೇ ನಾಡಿನಲ್ಲೇ ಆನೆಗಳು ಬೀಡುಬಿಟ್ಟಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರು ದೌಡಾಯಿಸಿದ್ದಾರೆ‌. ಕಾಡಾನೆಗಳ ಉಪಟಳದಿಂದ ಬೆಳೆ ಹಾನಿ ಜೊತೆಗೆ ಜೀವಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನೂರಾರು ಎಕರೆ ಜಮೀನು ಜಲಾವೃತ